ಬೇಕಾಗುವ ಪದಾರ್ಥಗಳು : ಮೊಸರು- 4 ಕಪ್, ಬೂದುಕುಂಬಳಕಾಯಿ- ಅರ್ಧ, ಈರುಳ್ಳಿ- 1, ಟೊಮಾಟೊ- 1, ಹಸಿಮೆಣಸಿನಕಾಯಿ- 3, ಖಾರದ ಪುಡಿ- 1 ಚಮಚ, ದನಿಯಾ ಪುಡಿ- 2 ಚಮಚ, ಕೊತ್ತಂಬರಿ-ಸ್ವಲ್ಪ, ಕರಿಬೇವು- 1 ಕಡ್ಡಿ, ಬೆಳ್ಳುಳ್ಳಿ- 1 ಉಂಡೆ, ಕಾಯಿ ಸ್ವಲ್ಪ, ಎಣ್ಣೆ, ಜೀರಿಗೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ : ಈರುಳ್ಳಿ, ಟೊಮಾಟೋ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಖಾರದಪುಡಿ, ದನಿಯಾ ಪುಡಿಗಳನ್ನು ರುಬ್ಬಿಕೊಳ್ಳಿ. ಕುಕ್ಕರಿಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು ರುಬ್ಬಿದ ಮಿಶ್ರಣ ಹಾಕಿ. ಸ್ವಲ್ಪ ಬೆಂದ ನಂತರ ಕತ್ತರಿಸಿದ ಬೂದುಕುಂಬಳಕಾಯಿ ಮತ್ತು ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ. ಆರಿದ ನಂತರ ಮೊಸರನ್ನು ಹಾಕಿ ಕಲಸಿ. ಬೇಕೆಂದರೆ ಕೊತ್ತಂಬರಿ ಸೊಪ್ಪು ಕತ್ತರಿಸಿ ಉದುರಿಸಿ.