ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ರುಚಿಯಾದ ಚಟ್ನಿ ಕೂಡ ಮಾಡಬಹುದು. ಇದು ಅನ್ನದ ಜತೆ ತಿನ್ನುವುದಕ್ಕೆ ಚೆನ್ನಾಗಿರುತ್ತದೆ.
ಸಾಮಗ್ರಿಗಳು: 1/2 ಕಪ್ – ತೆಂಗಿನ ತುರಿ, 4 – ಹಸಿಮೆಣಸಿನಕಾಯಿ, 4 ಎಸಳು – ಬೆಳ್ಳುಳ್ಳಿ, ¼ – ಚಮಚ ಕೊತ್ತಂಬರಿ, ಸ್ವಲ್ಪ ಪುದೀನಾ ಎಲೆ, ಒಂದು ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, 1 ಚಮಚ ಪುಟಾಣಿ, ¼ ಟೀ ಸ್ಪೂನ್ ಸಾಸಿವೆ, ಚಿಟಿಕೆ ಇಂಗು, 5 ಎಸಳು ಕರಿಬೇವು.
ಮಾಡುವ ವಿಧಾನ : ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತೆಂಗಿನ ತುರಿ, ಬೆಳ್ಳುಳ್ಳಿ ಎಸಳು, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಪುದೀನಾ, ಉಪ್ಪು, ಹುಣಸೆ ಹಣ್ಣು ಸೇರಿಸಿ ರುಬ್ಬಿ. ನಂತರ ಪುಟಾಣಿ ಸೇರಿಸಿ ಮತ್ತೊಮ್ಮೆ ರುಬ್ಬಿ ಒಂದು ಪಾತ್ರೆಗೆ ತೆಗೆದುಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿದರೆ ಪುದೀನಾ ಚಟ್ನಿ ರೆಡಿ.