alex Certify ಆರೋಗ್ಯಕರ ಜೀವನಕ್ಕೆ ಮುಖ್ಯ ಪ್ರೊಟೀನ್ ಯುಕ್ತ ಆಹಾರ ಸೇವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಜೀವನಕ್ಕೆ ಮುಖ್ಯ ಪ್ರೊಟೀನ್ ಯುಕ್ತ ಆಹಾರ ಸೇವನೆ

ಆರೋಗ್ಯಕರ ಜೀವನಕ್ಕೆ ಪ್ರೊಟೀನ್ ಯುಕ್ತ ಆಹಾರ ಸೇವನೆಯೂ ಬಹಳ ಮುಖ್ಯ. ಇದರಿಂದಾಗಿ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತದೆ. ಮುಖ್ಯವಾಗಿ ಯಾವೆಲ್ಲಾ ಪ್ರೊಟೀನ್ ಯುಕ್ತ ಆಹಾರ ಸೇವಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ.

ಮೊಳಕೆ ಬರಿಸಿದ ಕಾಳುಗಳು:

ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಿನ ಪ್ರೊಟೀನ್ ಹೊಂದಲು ಮೊಳಕೆ ಬರಿಸಿದ ಕಾಳುಗಳ ಸೇವನೆ ಉತ್ತಮ ಮಾರ್ಗ. ಇದು ಪೌಷ್ಠಿಕಾಂಶವನ್ನು ಹೆಚ್ಚಿಸುತ್ತದೆ. ಮೊಳಕೆ ಬಂದ ಕಾಳುಗಳಲ್ಲಿ ಪ್ರೊಟೀನ್, ಫೋಲೇಟ್, ಮೆಗ್ನೀಸಿಯಮ್, ರಂಜಕ, ಮ್ಯಾಂಗನೀಸ್, ವಿಟಮಿನ್ ಸಿ ಹಾಗೂ ಕೆ ಹೇರಳವಾಗಿರುತ್ತದೆ.

ಹೀಗಾಗಿ ಕೋವಿಡ್ ರೋಗಿಗಳು ಮೊಳಕೆ ಬರಿಸಿದ ಹೆಸರುಕಾಳು, ಅಲಸಂಡೆಬೀಜ, ಕಡಲೆ ಕಾಳು, ಹುರುಳಿ ಕಾಳು, ಬಟಾಣಿ ಕಾಳು ಮುಂತಾದವುಗಳನ್ನು ಸೇವಿಸಬೇಕು. ಇವುಗಳು ಹೆಚ್ಚಿನ ಪ್ರಮಾಣದ ಅಮೈನೋ ಆಮ್ಲಗಳನ್ನು ಹೊಂದಿವೆ. ಜೀರ್ಣಿಸಿಕೊಳ್ಳಲು ಕೂಡ ಸುಲಭವಾಗುತ್ತದೆ. ಅಲ್ಲದೆ ಇವು ಆಂಟಿನ್ಯೂಟ್ರಿಯಂಟ್ ಗಳನ್ನು ಕುಂಠಿತಗೊಳಿಸುವುದರಿಂದ ದೇಹವು ಬೇಗನೆ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಕುರಿಮಾಂಸ:

ನೀವೇನಾದರೂ ಮಾಂಸಹಾರಿಗಳಾಗಿದ್ದರೆ ಕುರಿಮಾಂಸ ಸೇವನೆ ಕೂಡ ಪ್ರೊಟೀನ್ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಕುರಿಮಾಂಸದಲ್ಲಿ ಅಮೈನೊ ಆಮ್ಲಗಳು ವಿಪುಲವಾಗಿದೆ ಹಾಗೂ ವಿವಿಧ ರೀತಿಯ ಕರುಳು ರೋಗ ಗುಣಪಡಿಸುವಂತಹ ಅಂಶಗಳು ಅಧಿಕವಾಗಿರುತ್ತದೆ. ಈ ಮಾಂಸದಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಕ ನಿರೋಧಕಗಳು ಹಾಗೂ ಇತರೆ ಪೋಷಕಾಂಶಗಳು ಹೇರಳವಾಗಿದೆ.

ಮೀನು:

ಮೀನಿನಲ್ಲಿ ಪ್ರೊಟೀನ್ ಮಾತ್ರವಲ್ಲದೆ ಉತ್ತಮ ಗುಣಮಟ್ಟದ ಒಮೆಗಾ-3, ಕೊಬ್ಬಿನಾಮ್ಲಗಳ ಜತೆಗೆ ವಿಟಮಿನ್ ಡಿ ಬಿ2 (ರಿಬೋಫ್ಲಾವಿನ್), ಕ್ಯಾಲ್ಸಿಯಂ, ರಂಜಕ, ಕಬ್ಬಿಣದಂತಹ ಖನಿಜಗಳು, ಸತು, ಅಯೋಡಿನ್, ಮೆಗ್ನೀಸಿಯಂ ಹಾಗೂ ಪೊಟ್ಯಾಸಿಯಮ್ ನ್ನು ಹೊಂದಿದೆ. ಇವು ಜೀರ್ಣಿಸಿಕೊಳ್ಳಲು ಕೂಡ ಸುಲಭವಾಗಿದೆ.

ದ್ವಿದಳ ಧಾನ್ಯಗಳು:

ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳೂ ಸೇರಿಸಿ. ಇವು ಪ್ರೊಟೀನ್, ಕಬ್ಬಿಣ, ಸತು, ಜೀವಸತ್ವಗಳು, ಸೆಲೆನಿಯಮ್ ಹಾಗೂ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಸಹಾಯ ಮಾಡುವ ಲೈಸಿನ್ ನಂತಹ ಪ್ರಮುಖ ಅಮೈನೋ ಆಮ್ಲ ಹೇರಳವಾಗಿದ್ದು, ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಾಗೂ ರೋಗನಿರೋಧಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇವುಗಳನ್ನು ದಾಲ್, ದೋಸೆ, ಚಾಟ್ ಸೇರಿದಂತೆ ವಿವಿಧ ಆರೋಗ್ಯಕರ ಭಕ್ಷ್ಯಗಳಲ್ಲಿ ಬಳಸಬಹುದು.

ಮೊಟ್ಟೆ:

ಮೊಟ್ಟೆಗಳಲ್ಲಿ ಆಂಟಿಆಕ್ಸಿಡ್ ಪ್ರಮಾಣ ಇರುವುದರಿಂದ ಕೊರೋನಾದಿಂದ ಚೇತರಿಸಿಕೊಳ್ಳಲು ಮೊಟ್ಟೆ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ವಿಟಮಿನ್ ಡಿ ಪ್ರಮಾಣ ಸಮೃದ್ಧವಾಗಿರುವುದರಿಂದ ಇಮ್ಯೂನಿಟಿ ಬೂಸ್ಟ್ ಹೆಚ್ಚು ಮಾಡಲು ಸಹಕಾರಿ. ಬೇಯಿಸಿದ ಮೊಟ್ಟೆ ದಿನಕ್ಕೊಂದರಂತೆ ಪ್ರತಿದಿನ ನಿಮ್ಮ ಆಹಾರದ ಪಟ್ಟಿಯಲ್ಲಿರಲಿ. ಒಂದು ಮೊಟ್ಟೆಯಲ್ಲಿ ದಿನಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ಸಿಗುತ್ತದೆ. ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಗಳಷ್ಟು ಪ್ರೊಟೀನ್ ಅಂಶ ಸೇರಿದೆ. ಜೊತೆಗೆ ಸಾಕಷ್ಟು ಅಮೈನೋ ಆಮ್ಲಗಳ ಅಂಶ ಕೂಡ ಸೇರಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...