ಮಕ್ಕಳು ಮನೆಯಲ್ಲಿದ್ದಾರೆ ಏನಾದರೂ ತಿನ್ನುವುದಕ್ಕೆ ಕೇಳುತ್ತಿರುತ್ತಾರೆ. ಹೊರಗಡೆಯಿಂದ ತಂದ ತಿಂಡಿ ಕೊಡುವುದಕ್ಕಿಂತ ಮನೆಯಲ್ಲಿಯೇ ಆರೋಗ್ಯಕರವಾದ ಲಡ್ಡು ಮಾಡಿಕೊಟ್ಟರೆ ಅವರ ಆರೋಗ್ಯ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಓಟ್ಸ್, ¼ ಕಪ್ – ಗೋಡಂಬಿ, 2 ಕಪ್ – ಮಿಕ್ಸಡ್ ಡ್ರೈ ಫ್ರೂಟ್ಸ್, 1 ½ ಟೇಬಲ್ ಸ್ಪೂನ್ – ರಾಕ್ ಶುಗರ್.
ಮೊದಲಿಗೆ ಓಟ್ಸ್ ಅನ್ನು 5 ನಿಮಿಷಗಳ ಕಾಲ ದಪ್ಪ ತಳದ ಪಾತ್ರೆಯಲ್ಲಿ ಹುರಿಯಿರಿ.
ಮಾಡುವ ವಿಧಾನ:
ಗೋಡಂಬಿಯನ್ನು ಕತ್ತರಿಸಿ ಡ್ರೈ ರೋಸ್ಟ್ ಮಾಡಿಕೊಳ್ಳಿ. ನಂತರ ಡ್ರೈ ಫ್ರೂಟ್ಸ್ ಗಳನ್ನು ಚಿಕ್ಕದಾಗಿ ಕತ್ತರಿಸಿ ಉಗುರು ಬೆಚ್ಚಗಾಗುವಷ್ಟು ಬಿಸಿ ಮಾಡಿಕೊಳ್ಳಿ. ಓಟ್ಸ್ ಅನ್ನು ಮಿಕ್ಸಿ ಗೆ ಹಾಕಿ ಪೌಡರ್ ಮಾಡಿ ಅದಕ್ಕೆ ಡ್ರೈಫ್ರೂಟ್ಸ್ ಹಾಕಿ ಮಿಕ್ಸಿ ಮಾಡಿಕೊಂಡು ಒಂದು ಪಾತ್ರೆಗೆ ತೆಗೆದುಕೊಂಡಿರಿ. ಇದಕ್ಕೆ ರಾಕ್ ಶುಗರ್ ಹಾಗೂ ಗೋಡಂಬಿ ಹಾಕಿ ಮಿಕ್ಸ್ ಮಾಡಿ ಚಿಕ್ಕ ಚಿಕ್ಕ ಉಂಡೆ ಕಟ್ಟಿದರೆ ಓಟ್ಸ್ ಲಡ್ಡು ರೆಡಿ.