alex Certify ಆರೋಗ್ಯಕರ ʼಬಾಳೆʼ ಹಣ್ಣಿನ ಆರಂಭ ಹೇಗಾಯ್ತು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ʼಬಾಳೆʼ ಹಣ್ಣಿನ ಆರಂಭ ಹೇಗಾಯ್ತು ಗೊತ್ತಾ…..?

ಬಾಳೆಹಣ್ಣನ್ನು ಇಷ್ಟಪಡದೇ ಇರುವವರು ಬಹಳ ಕಡಿಮೆ. ಇದು ಆಹಾರ ಜೀರ್ಣವಾಗಲು ತುಂಬ ಸಹಾಯಕಾರಿ. ಬಾಳೆಯನ್ನು ಮೊದಲು ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಬೆಳೆಯಲಾಯಿತು. ಅಲ್ಲಿನ ಅರಣ್ಯಗಳಲ್ಲಿ ಕಾಡು ಬಾಳೆ ಬೆಳೆಯುತ್ತಿತ್ತು.

ಅನೇಕ ವರ್ಷಗಳ ನಂತರ ಕಾಡು ಬಾಳೆಯನ್ನು ಸೂಕ್ತ ವಿಧಾನದಲ್ಲಿ ಬೆಳೆಸಲಾಯಿತು. ಇದರ ಫಲವಾಗಿ ರುಚಿಕರವಾದ ಬಾಳೆಹಣ್ಣು ದೊರೆಯಲಾರಂಭಿಸಿದ್ದು, ಕಾಲಕಳೆದಂತೆ ಬಾಳೆಹಣ್ಣು ತುಂಬ ಜನಪ್ರಿಯತೆ ಪಡೆಯಿತು. ಇದರಿಂದಾಗಿ ಬಾಳೆಯನ್ನು ವಿಶ್ವದೆಲ್ಲೆಡೆ ಬೆಳೆಯಲು ಆರಂಭಿಸಲಾಯಿತು.

ಬಾಳೆಹಣ್ಣಿನಲ್ಲಿ ಪ್ರತಿಶತ 74ರಷ್ಟು ನೀರು, 20 ರಷ್ಟು ಸಕ್ಕರೆ, 2 ರಷ್ಟು ಪ್ರೋಟೀನು, 1.5 ರಷ್ಟು ಜಿಡ್ಡು ಪದಾರ್ಥ, 1ರಷ್ಟು ಸೆಲ್ಯುಲೋಸ್ ಗಳಿರುತ್ತವೆ. ಈ ಹಣ್ಣಿನಲ್ಲಿ ಎ,ಸಿ, ಬಿ1, ಬಿ2 ವಿಟಮಿನ್ ಗಳಿರುತ್ತವೆ. ಬಾಳೆಹಣ್ಣನ್ನು ಒಣಗಿಸಿ ಹಿಟ್ಟನ್ನು ಮಾಡುತ್ತಾರೆ. ಆಫ್ರಿಕಾದ ಜನರು ತಮ್ಮ ಗುಡಿಸಲಿಗೆ ಬಾಳೆಎಲೆಗಳನ್ನು ಹಾಕಿ ಮುಚ್ಚುತ್ತಾರೆ. ಬಾಳೆಮರವನ್ನು ಒಣಗಿಸಿ ಅದರ ನಾರಿನಿಂದ ಹಗ್ಗ ತಯಾರಿಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...