ಮೆಂತ್ಯ ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯ ದೋಸೆ ಮನೆಯಲ್ಲಿ ಆಗಾಗ ಮಾಡುತ್ತಿರುತ್ತೇವೆ. ಹಾಗೇ ಈ ಮೆಂತ್ಯಕಾಳುಗಳನ್ನು ಬಳಸಿ ರುಚಿಕರವಾದ ಇಡ್ಲಿ ಕೂಡ ಮಾಡಬಹುದು. ಬೇಕಾಗುವ ಸಾಮಾಗ್ರಿಗಳು ಕೂಡ ತುಂಬಾ ಕಡಿಮೆ.
ಬೇಕಾಗುವ ಸಾಮಾಗ್ರಿಗಳು:
2 ಕಪ್ – ಅಕ್ಕಿ, 2 ಟೇಬಲ್ ಸ್ಪೂನ್ – ಮೆಂತ್ಯಕಾಳು, 2 ಟೀ ಸ್ಪೂನ್ – ಉಪ್ಪು, ನೀರು – ಸ್ವಲ್ಪ.
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ಹಾಗೇ ಮೆಂತ್ಯಕಾಳುಗಳನ್ನು ಕೂಡ ಒಂದು ಪಾತ್ರೆಯಲ್ಲಿ ನೆನೆಸಿಡಿ.
ನಂತರ ಇವೆರೆಡನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ. ತುಂಬಾ ನೀರು ಹಾಕಬೇಡಿ. ಇಡ್ಲಿ ಹಿಟ್ಟಿನ ಹದಕ್ಕೆ ಇರಲಿ.
ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ 8 ಗಂಟೆಗಳ ಕಾಲ ಹಾಗೆಯೇ ಬಿಡಿ. ಬೆಳಿಗ್ಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಇಡ್ಲಿ ಪಾತ್ರೆಗೆ ಹಾಕಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಚಟ್ನಿ ಜತೆ ಸವಿಯಲು ಚೆನ್ನಾಗಿರುತ್ತದೆ.