ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದಲ್ಲದೇ ತ್ವಚೆಯೂ ಕೂಡ ನಳನಳಿಸುತ್ತದೆ.
ಸುಲಭವಾಗಿ ಇದನ್ನು ಮಾಡಬಹುದು. ಇಲ್ಲಿದೆ ನೋಡಿ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
4 – ಕ್ಯಾರೆಟ್ , ½ ಇಂಚು – ಶುಂಠಿ, 2 – ಕಿತ್ತಳೆ ಹಣ್ಣು, 1 ಕಪ್ – ನೀರು.
ಮಾಡುವ ವಿಧಾನ:
ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ಕ್ಯಾರೆಟ್, ಕತ್ತರಿಸಿಟ್ಟುಕೊಂಡ ಶುಂಠಿ, ಕಿತ್ತಳೆಹಣ್ಣಿನ ಸಿಪ್ಪೆ ತೆಗೆದು ತೊಳೆಗಳ ಬೀಜ ತೆಗೆದು ಮಿಕ್ಸಿಗೆ ಹಾಕಿ ಹಾಗೇ ನೀರು ಕೂಡ ಸೇರಿಸಿ ನಯವಾಗಿ ರುಬ್ಬಿ ಸೋಸಿಕೊಳ್ಳಿ. ತಾಜಾವಾಗಿರುವಾಗಲೇ ಸರ್ವ್ ಮಾಡಿ.