ಮಕ್ಕಳಿಗೆ ಏನಾದರೂ ಆರೋಗ್ಯಕರವಾದ ತಿನಿಸುಗಳನ್ನು ಮಾಡಿಕೊಟ್ಟರೆ ಅವರ ಹೊಟ್ಟೆನೂ ತುಂಬುತ್ತದೆ. ಹಾಗೇ ಅವರ ಆರೋಗ್ಯಕ್ಕೂ ಅದು ಒಳ್ಳೆಯದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ – ಓಟ್ಸ್, ¾ ಕಪ್ – ಬ್ರೌನ್ ಶುಗರ್, ¼ ಕಪ್ – ಜೇನುತುಪ್ಪ, ½ ಟೀ ಸ್ಪೂನ್ – ವೆನಿಲ್ಲಾ ಎಸೆನ್ಸ್, ಚಿಟಿಕೆ – ಉಪ್ಪು, 1ಟೇಬಲ್ ಸ್ಪೂನ್ – ಬೆಣ್ಣೆ, 2 ಟೀ ಸ್ಪೂನ್ – ತುಪ್ಪ, 1/4 ಕಪ್ – ಬಾದಾಮಿ, ¼ ಕಪ್ ಪಿಸ್ತಾ, 2 ಟೇಬಲ್ ಸ್ಪೂನ್ – ಗೋಡಂಬಿ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಬಾದಾಮಿ, ಪಿಸ್ತಾ, ಗೋಡಂಬಿ ಹಾಕಿ 2 ನಿಮಿಷಗಳ ಕಾಲ ಹುರಿದು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಓಟ್ಸ್ ಹಾಕಿ 5 ನಿಮಿಷಗಳ ಕಾಲ ಹುರಿಯಿರಿ. ಇದು ಬಣ್ಣ ಬದಲಾಗುತ್ತಿದ್ದಂತೆ ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ.
ನಂತರ ಒಂದು ಪ್ಯಾನ್ ಗೆ ಬ್ರೌನ್ ಸಕ್ಕರೆ ಹಾಗೂ ಸ್ವಲ್ಪ ನೀರನ್ನು ಸೇರಿಸಿಕೊಂಡು ಜೋರು ಉರಿಯಲ್ಲಿ 3 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ. ನಂತರ ಇದಕ್ಕೆ ಹುರಿದಿಟ್ಟುಕೊಂಡ ಡ್ರೈ ಫ್ರೂಟ್ಸ್, ಓಟ್ಸ್, ಜೇನುತುಪ್ಪ, ವೆನಿಲ್ಲಾ ಎಸೆನ್ಸ್, ತುಪ್ಪ, ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿ. ಮಿಶ್ರಣ ತುಸು ಗಟ್ಟಿಯಾದರೆ ತುಪ್ಪ ಸೇರಿಸಿಕೊಂಡು ಮಿಕ್ಸ್ ಮಾಡಿ ಉಂಡೆ ಕಟ್ಟಿ.