ಆರೋಗ್ಯಕರವಾದ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಿರಿ. ಇಲ್ಲಿ ರುಚಿಕರವಾದ ಓಟ್ಸ್ ಕುಕ್ಕಿಸ್ ಇದೆ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಗೋಧಿ ಹಿಟ್ಟು, 1 ಕಪ್ – ಓಟ್ಸ್, ¾ ಟೀ ಸ್ಪೂನ್ – ಬೇಕಿಂಗ್ ಪೌಡರ್, ¾ ಟೀ ಸ್ಪೂನ್ – ಏಲಕ್ಕಿ ಪುಡಿ, ¼ ಟೀ ಸ್ಪೂನ್ – ಉಪ್ಪು, ½ ಕಪ್ – ಬೆಣ್ಣೆ, ¾ ಕಪ್ – ಬೆಲ್ಲದ ಪುಡಿ, 3 ಟೇಬಲ್ ಸ್ಪೂನ್ – ಹಾಲು, ¼ ಕಪ್ – ಬಾದಾಮಿ ಹಾಗೂ ಗೋಡಂಬಿ ಚೂರುಗಳು.
ತಯಾರಿಸುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಗೋಧಿ ಹಿಟ್ಟು, ಓಟ್ಸ್, ಬೇಕಿಂಗ್ ಪೌಡರ್, ಏಲಕ್ಕಿ ಪೌಡರ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇನ್ನೊಂದು ಬೌಲ್ ಗೆ ಬೆಣ್ಣೆ ಹಾಗೂ ಬೆಲ್ಲ ಹಾಕಿ 3 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ ಇದು ಕ್ರೀಂನ ಹದಕ್ಕೆ ಬರಲಿ. ನಂತರ ಇದಕ್ಕೆ ಹಾಲು ಸೇರಿಸಿ ಮಿಕ್ಸ್ ಮಾಡಿ.
ಇದನ್ನು ಹಿಟ್ಟು ಇರುವ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಟ್ಸ್ ಹಾಕಿ ನಂತರ ಇದರಿಂದ ಸ್ವಲ್ಪ ಸ್ವಲ್ಪ ಹಿಟ್ಟಿನ ಮಿಶ್ರಣ ತೆಗೆದುಕೊಂಡು ಕುಕ್ಕಿಸ್ ಆಕಾರದಲ್ಲಿ ತಟ್ಟಿ. ಇದನ್ನು ಬೇಕಿಂಗ್ ಟ್ರೇನಲ್ಲಿಡಿ.
ಇದನ್ನು ಓವೆನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿದರೆ ರುಚಿಯಾದ ಓಟ್ಸ್ ಕುಕ್ಕೀಸ್ ರೆಡಿ.