alex Certify ಇಲ್ಲಿದೆ ಪೌಷ್ಟಿಕಾಂಶಭರಿತ ಅಂಟಿನುಂಡೆ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪೌಷ್ಟಿಕಾಂಶಭರಿತ ಅಂಟಿನುಂಡೆ ಮಾಡುವ ವಿಧಾನ

ಅಂಟಿನುಡೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಡ್ರೈ ಫ್ರೂಟ್ಸ್ ಗಳನ್ನು ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.

ಒಂದು ಪ್ಯಾನ್ ಗೆ ¼ ಕಪ್ ತುಪ್ಪ ಹಾಕಿ ಅದಕ್ಕೆ ಮೊದಲು ½ ಕಪ್ ಅಂಟು ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಉಳಿದ ಅರ್ಧ ಕಪ್ ಅಂಟು ಹಾಕಿ ಹುರಿಯಿರಿ. ಹುರಿದ ಅಂಟನ್ನು ಒಂದು ಬೌಲ್ ಗೆ ತೆಗೆದುಕೊಂಡು ಕೈಯಿಂದನೇ ತರಿ ತರಿಯಾಗಿ ಪುಡಿ ಮಾಡಿ.

ನಂತರ ಅದೇ ಪ್ಯಾನ್ ಗೆ 2 ಟೇಬಲ್ ಸ್ಪೂನ್, ಗೋಡಂಬಿ ಚೂರುಗಳು, 2 ಟೇಬಲ್ ಸ್ಪೂನ್ ಬಾದಾಮಿ, 2 ಟೇಬಲ್ ಸ್ಪೂನ್ ದ್ರಾಕ್ಷಿ ಹಾಕಿ ಹುರಿದುಕೊಂಡು ಇದನ್ನು ಅಂಟಿರುವ ಬೌಲ್ ಗೆ ಹಾಕಿ. ನಂತರ 1 ಕಪ್ ಕೊಬ್ಬರಿ ತುರಿಯನ್ನು 1 ಟೇಬಲ್ ಸ್ಪೂನ್ ತುಪ್ಪದಲ್ಲಿ ಹುರಿದು ಬೌಲ್ ಗೆ ಹಾಕಿ. ಒಣ ಖರ್ಜೂರದ ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ.

ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಂಡು ಬೌಲ್ ಗೆ ಹಾಕಿ. ನಂತರ 1 ½ ಕಪ್ ಬೆಲ್ಲವನ್ನು ಒಂದು ಪ್ಯಾನ್ ಗೆ ಹಾಕಿ ಅದಕ್ಕೆ 2 ಟೇಬಲ್ ಸ್ಪೂನ್ ನೀರು ಹಾಕಿ ಪಾಕ ತಯಾರಿಸಿಕೊಳ್ಳಿ. ಒಂದೆಳೆ ಪಾಕ ಬಂದರೆ ಸಾಕು. ಇದನ್ನು ಡ್ರೈ ಫ್ರೂಟ್ಸ್ ಇರುವ ಬೌಲ್ ಗೆ ಹಾಕಿ ಎಲ್ಲವನ್ನು ಒಟ್ಟು ಸೇರಿಸಿ ಉಂಡೆ ಕಟ್ಟಿದರೆ ರುಚಿಕರವಾದ ಅಂಟಿನುಂಡೆ ಸವಿಯಲು ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...