ವಿಶ್ವದ ಯಾವುದೇ ಬಲಿಷ್ಠ ಶಕ್ತಿಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಭಾರತವು ಸಾಧಿಸಿ ತೋರಿಸಿದೆ. ಹೌದು..! ಬರೋಬ್ಬರಿ ಆರು ಗಂಟೆಗಳ ಕಾಲ ಭಾರತವು ಖಾರ್ಕಿವ್ನಲ್ಲಿ ಯುದ್ಧ ನಿಲ್ಲುವಂತೆ ಮಾಡಿತ್ತು ಅಂದರೆ ನೀವು ನಂಬಲೇಬೇಕು.
ಉಕ್ರೇನ್ನ ಎರಡನೇ ಅತಿದೊಡ್ಡ ನಗರದಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು ಭಾರತದ ಉದ್ದೇಶವಾಗಿದ್ದು, ಮಾಸ್ಕೋ ತನ್ನ ಆಕ್ರಮಣವನ್ನು ಕೆಲವು ಗಂಟೆಗಳ ಕಾಲ ನಿಲ್ಲಿಸುವಂತೆ ಮಾಡಿದ ಭಾರತದ ನಡೆ ಹಾಗೂ ವಿಧಾನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ, ಬಳಕೆದಾರರು ಭಾರತದ ಕ್ರಮವನ್ನು ಭಾರತೀಯ ರಾಜತಾಂತ್ರಿಕತೆಯ ಶಕ್ತಿಯ ಪ್ರತಿಬಿಂಬ ಎಂದು ಬಣ್ಣಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.
ಫೆಬ್ರವರಿ 26 ರಂದು ಪ್ರಾರಂಭವಾದ ಆಪರೇಷನ್ ಗಂಗಾ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಕ್ರೇನ್, ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಪುಟಿನ್ ಹೇಳಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಅನುಸರಿಸಿದ ಚಾಣಾಕ್ಷ ನಡೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://twitter.com/eOrganiser/status/1499107356143386624?ref_src=twsrc%5Etfw%7Ctwcamp%5Etweetembed%7Ctwterm%5E1499107356143386624%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fasianetnewsable-epaper-asnewsab%2Fsocialmediahailspowerofindiandiplomacyasindiahaltswarinkharkivfor6hours-newsid-n364527614%3Fs%3Dauu%3D0xb376f4ef2ad749c2ss%3Dwsp