alex Certify ಆಮ್ಲೇಟ್ ನಿಂದ ಪ್ರಾಣ ಹೋಯ್ತು ಅಂದ್ರೆ ನೀವು ನಂಬ್ತೀರಾ…? ಈ ಸ್ಟೋರಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲೇಟ್ ನಿಂದ ಪ್ರಾಣ ಹೋಯ್ತು ಅಂದ್ರೆ ನೀವು ನಂಬ್ತೀರಾ…? ಈ ಸ್ಟೋರಿ ಓದಿ

ಜನಗಾಮ- ಅನೇಕ ಬಾರಿ ನಾವು ತಿನ್ನೋ ಆಹಾರವೇ ನಮ್ಮ ಪ್ರಾಣಕ್ಕೆ ಕುತ್ತು ತರುತ್ತೆ. ಎಷ್ಟೋ ಪ್ರಕರಣಗಳಲ್ಲಿ ಮಕ್ಕಳು ಏನಾದ್ರೂ ತಿನ್ನೋವಾಗ ಗಂಟಲಲ್ಲಿ  ಸಿಕ್ಕಾಕಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಆಮ್ಲೇಟ್ ತಿನ್ನೋದಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ.

ಹೌದು, ಈ ಘಟನೆ ನಡೆದಿರೋದು ತೆಲಂಗಾಣದಲ್ಲಿ. ಇಲ್ಲಿನ ಬಚ್ಚನಪೇಟೆಯ ಭೂಪಾಲ ರೆಡ್ಡಿ ಸಾವನ್ನಪ್ಪಿರುವ ವ್ಯಕ್ತಿ. ಇಲ್ಲಿನ ಸ್ಥಳೀಯ ಬಾರ್ ಒಂದರಲ್ಲಿ ಕುಳಿತು ಕುಡಿಯುತ್ತಿದ್ದ ವೇಳೆ ಆಮ್ಲೇಟ್ ತರಿಸಿಕೊಂಡಿದ್ದಾರೆ. ತಿನ್ನುವ ವೇಳೆ ಇದು ಗಂಟಲಿಗೆ ಸಿಕ್ಕಾಕಿಕೊಂಡಿದೆ. ಇದರ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಾವಿನ ಸಂಬಂಧ ಇದೀಗ ತನಿಖೆ ಆರಂಭಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...