ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ಪ್ರೀತಿ. ಅದರಲ್ಲೂ ಶುಭ ಸಮಾರಂಭಗಳ ವೇಳೆ ಆಭರಣ ಧರಿಸುವುದು ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಆಭರಣ ಪ್ರಿಯರಿಗೆ ಕಳೆದ ಕೆಲವು ದಿನಗಳಿಂದ ನಿತ್ಯವೂ ಸಿಹಿಸುದ್ದಿ ಸಿಗುತ್ತಿದ್ದು ಶುಕ್ರವಾರವೂ ಇದು ಮುಂದುವರೆದಿದೆ.
ಹೌದು, ಚಿನ್ನದ ಬೆಲೆ ಈಗ ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಶುಕ್ರವಾರವೂ ಸಹ ಚಿನ್ನದ ಬೆಲೆಯಲ್ಲಿ 239 ರೂಪಾಯಿ ಕಡಿಮೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯೀಗ 45,568 ರೂಪಾಯಿ ತಲುಪಿದೆ. ಶುಭ ಸಮಾರಂಭಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಆಭರಣ ಪ್ರಿಯರಲ್ಲಿ ಮಂದಹಾಸ ಮೂಡಿಸಿದೆ.
ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೈಗೆಟುಕುವ ದರದಲ್ಲಿ ವಸತಿ
ಇನ್ನು ಬೆಳ್ಳಿ ಬೆಲೆಯೂ ಸಹ ಶುಕ್ರವಾರದಂದು ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆಯಲ್ಲಿ 723 ರೂಪಾಯಿ ಇಳಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆ ಈಗ 67,370 ರೂಪಾಯಿ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲೂ ಇದು ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.