ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಚಿನ್ನದ ದರ ಈ ವರ್ಷದ ದಾಖಲೆಯ ಮಟ್ಟ ತಲುಪಿದೆ. ಡಿಸೆಂಬರ್ ತಿಂಗಳಲ್ಲಿ 20 ದಿನಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 2000 ರೂಪಾಯಿಗಿಂತ ಹೆಚ್ಚು ಏರಿಕೆ ಕಂಡಿದೆ. ಬೆಳ್ಳಿ ಕೆಜಿಗೆ ಸುಮಾರು 6300 ರೂಪಾಯಿಯಷ್ಟು ಹೆಚ್ಚಳವಾಗಿದೆ. ಈ ಹಿಂದೆ ನವೆಂಬರ್‌ನಲ್ಲಿಯೂ ಸಹ ಚಿನ್ನದ ಬೆಲೆ 10 ಗ್ರಾಂಗೆ 2600 ರೂಪಾಯಿ ಮತ್ತು ಬೆಳ್ಳಿಯ ಬೆಲೆ 5000 ರೂಪಾಯಿಯಷ್ಟು ಏರಿಕೆಯಾಗಿತ್ತು.
ಸದ್ಯದಲ್ಲೇ ಬಂಗಾರದ ಬೆಲೆ 56,000 ಸಾವಿರ ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಬೆಳ್ಳಿ ಕೂಡ 80 ಸಾವಿರದ ಗಡಿ ದಾಟಬಹುದು. ಇವತ್ತಿನ ವಹಿವಾಟಿನ ವೇಳೆ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಕುಸಿತ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ. ಸದ್ಯ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 55,025 ರೂಪಾಯಿಗೆ ಏರಿಕೆಯಾಗಿದೆ. ಬೆಳ್ಳಿ 419 ರೂಪಾಯಿ ಇಳಿಕೆಯಾಗಿ 69,290 ರೂಪಾಯಿಗೆ ಬಂದು ತಲುಪಿದೆ. 22 ಕ್ಯಾರೆಟ್ ಬಂಗಾರ 10 ಗ್ರಾಂಗೆ 50,163 ರೂಪಾಯಿ ಆಗಿದೆ.
ಈ ವರ್ಷ ಚಿನ್ನ ಮತ್ತು ಬೆಳ್ಳಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿವೆ. ಈ ಹಿಂದೆ 2020ರ ಆಗಸ್ಟ್‌ನಲ್ಲಿ ಚಿನ್ನದ ಬೆಲೆ 56,200 ರೂಪಾಯಿ ಆಗಿತ್ತು. ಬುಲಿಯನ್ ಮಾರುಕಟ್ಟೆಯಲ್ಲಿ 24-ಕ್ಯಾರೆಟ್ ಚಿನ್ನವು 10 ಗ್ರಾಂಗೆ 63 ರೂಪಾಯಿಗಳಷ್ಟು ಏರಿಕೆಯಾಗಿ 54,763 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಪ್ರತಿ ಕೆಜಿಗೆ 68,229 ರೂಪಾಯಿಗೆ ತಲುಪಿದೆ. ಇದು ಈ ವರ್ಷದ ದಾಖಲೆಯ ಮಟ್ಟವಾಗಿದೆ.