ದಿನಬೆಳಗಾದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಚಿನ್ನದ ಬೆಲೆ 55,000 ದ ಗಡಿ ದಾಟಿದೆ. ಇತ್ತ ಬೆಳ್ಳಿಯ ದರಗಳಲ್ಲಿ ಕೂಡ ಏರಿಯಾಗಿದೆ.
MCX ನಲ್ಲಿ, ಚಿನ್ನದ ಭವಿಷ್ಯದ ಬೆಲೆ 10 ಗ್ರಾಂಗೆ 55,190 ರೂ. ಏರಿಕೆಯಾಗಿದ್ದು, ಈ ಮೂಲಕ 1.4% ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆ 1.8% ಏರಿಕೆಯಾಗಿ ಪ್ರತಿ ಕೆಜಿಗೆ 72,698 ರೂ. ತಲುಪಿದೆ.
ಜಾಗತಿಕ ಮಾರುಕಟ್ಟೆಯ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆ ದಾಖಲೆಯ ಏರಿಕೆ ಕಂಡಿತ್ತು. ಇದು ಕಳೆದ 19 ತಿಂಗಳಲ್ಲಿ ದಾಖಲಾದ ಗರಿಷ್ಠ ಬೆಲೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಅಂತಹ ಹೆಚ್ಚಳವಾಗದೇ, ಕಡಿಮೆ ಪ್ರಮಾಣದ ಏರಿಕೆಯೊಂದಿಗೆ ಸ್ಥಿರವಾಗಿ ಉಳಿದಿದೆ.
ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $2,053.99 ರಷ್ಟಿದೆ. ಮಂಗಳವಾರದಂದು ಸುಮಾರು ಒಂಬತ್ತು ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಸ್ಪಾಟ್ ಸಿಲ್ವರ್ ಪ್ರತಿ ಔನ್ಸ್‌ಗೆ $26.66 ಕ್ಕೆ 1% ಹೆಚ್ಚಾಗಿದೆ. ಭಾರತದಲ್ಲಿ, ಈ ಹಿಂದೆ ಚಿನ್ನದ ಬೆಲೆ 10 ಗ್ರಾಂಗೆ 56,200 ರೂ. ಏರಿಕೆಯಾಗಿದ್ದು ಇದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನ್ನಲಾಗಿದೆ.