ಆಪ್ ಸೇರ್ಪಡೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರಿ ಅಂಜು ಸೆಹ್ವಾಗ್ 01-01-2022 10:27AM IST / No Comments / Posted In: India, Featured News, Live News ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹೋದರಿ ಅಂಜು ಸೆಹ್ವಾಗ್ ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ವಿರೇಂದ್ರ ಸೆಹ್ವಾಗ್ ಸಹೋದರಿ ಅಂಜು ಸೆಹ್ವಾಗ್ ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇವರು ದೆಹಲಿಯಲ್ಲಿ ಕಾಂಗ್ರೆಸ್ನ ಮಾಜಿ ಕೌನ್ಸಿಲರ್ ಆಗಿದ್ದರು. ಹಾಗೂ ವೃತ್ತಿಯಲ್ಲಿ ಶಿಕ್ಷಕಿ ಕೂಡ ಹೌದು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾಡಿದ ಜನಪರ ಕೆಲಸಗಳಿಂದ ಪ್ರೇರಿತರಾಗಿ ಅಂಜು ಸೆಹ್ವಾಗ್ ತಮ್ಮ ಎಲ್ಲಾ ಬೆಂಬಲಿಗರ ಜೊತೆಯಲ್ಲಿ ಆಪ್ ಸೇರ್ಪಡೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಅಧಿಕೃತ ಟ್ವೀಟ್ ಮಾಡಿದೆ. ಅಂಜು ಸೆಹ್ವಾಗ್ 2012ರಲ್ಲಿ ದೆಹಲಿಯ ಎಂಸಿಡಿ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾದ ದಕ್ಷಿಣಪುರಿ ಎಕ್ಸ್ಟೆಂಷನ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಆರತಿ ದೇವಿಯನ್ನು 558 ಮತಗಳ ಅಂತರದಿಂದ ಸೋಲಿಸಿದ್ದರು. ಅಂಜು ಸೆಹ್ವಾಗ್ ಲಕ್ಷ್ಮಣ ಪಬ್ಲಿಕ್ ಸ್ಕೂಲ್ನಲ್ಲಿ ಹಿಂದಿ ಶಿಕ್ಷಕಿಯಾಗಿದ್ದರು. ಅವರು ಎರಡು ಮಕ್ಕಳ ತಾಯಿ ಕೂಡ ಹೌದು. ಕಾಂಟ್ರ್ಯಾಕ್ಟರ್ ರವೀಂದರ್ ಸಿಂಗ್ರನ್ನು ವಿವಾಹವಾಗಿದ್ದ ಅಂಜು ಬಳಿಕ 2000ದಲ್ಲಿ ನಜಾಫ್ಗಢದಿಂದ ಮದನ್ಗಿರಿಗೆ ಶಿಫ್ಟ್ ಆಗಿದ್ದಾರೆ. ಅಂಜು ಕುಟುಂಬವು ದಶಕಗಳಿಂದ ಕಾಂಗ್ರೆಸ್ನ್ನು ಬೆಂಬಲಿಸಿದೆ ಹಾಗೂ ಇವರ ಕುಟುಂಬದಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. Virender Sehwag's sister, Smt Anju Sehwag joins AAP! She is a former Congress councillor from Delhi and was a Teacher by profession. Inspired by the work done by CM Kejriwal, she has joined AAP with all her supporters! pic.twitter.com/tdgdj7SYQ1 — AAP (@AamAadmiParty) December 31, 2021