
ತರಕಾರಿ ಸಲಾಡ್ ತಿಂದಿರುತ್ತಿರಿ ನೀವೆಲ್ಲಾ. ಇಲ್ಲಿ ಸೇಬುಹಣ್ಣನ್ನು ಉಪಯೋಗಿಸಿಕೊಂಡು ಮಾಡಬಹುದಾದ ಸಲಾಡ್ ಇದೆ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
1.5 ಕಪ್- ಕತ್ತರಿಸಿದ ಸೇಬುಹಣ್ಣು, 1/3 ಕಪ್- ಮೊಸರು, 1 ಟೇಬಲ್ ಸ್ಪೂನ್-ಜೇನುತುಪ್ಪ, 1/4 ಟೀ ಸ್ಪೂನ್- ಚಕ್ಕೆ ಪುಡಿ, ¼ ಟೀ ಸ್ಪೂನ್-ವೆನಿಲ್ಲಾ ಎಸೆನ್ಸ್, 1 ಟೇಬಲ್ ಸ್ಪೂನ್-ಕತ್ತರಿಸಿದ ಪಿಸ್ತಾ ಚೂರುಗಳು.
ಮಾಡುವ ವಿಧಾನ:
ಒಂದು ಬೌಲ್ ಗೆ ಕತ್ತರಿಸಿದ ಸೇಬುಹಣ್ಣುಗಳನ್ನು ಹಾಕಿ ನಂತರ ಇದಕ್ಕೆ ಮೊಸರು, ಚಕ್ಕೆ ಪುಡಿ, ವೆನಿಲ್ಲಾ ಎಸೆನ್ಸ್, ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಅದೇ ಕೂಡಲೇ ಸರ್ವ್ ಮಾಡಿ. ಇಲ್ಲದಿದ್ದರೆ ಫ್ರಿಡ್ಜ್ ನಲ್ಲಿ ಇಟ್ಟು ಕೂಡ ಸರ್ವ್ ಮಾಡಬಹುದು. ಸಂಜೆಯ ಸ್ನ್ಯಾಕ್ಸ್ ಗೆ ತುಂಬಾ ಚೆನ್ನಾಗಿರುತ್ತದೆ ಈ ಸಲಾಡ್.