ವಿಶ್ವದ ಟೆಕ್ ದೈತ್ಯ ಎನಿಸಿಕೊಂಡಿರುವ Apple ಕಂಪನಿ ತನ್ನ “Pro Max” ಮೊಬೈಲ್‌ಗಳನ್ನು “Ultra” ದೊಂದಿಗೆ ಮರುಹೆಸರಿಸುವ ಸಾಧ್ಯತೆ ಇದೆ. ಈಗಾಗ್ಲೇ ಐಫೋನ್ 14 ಸರಣಿಯನ್ನು ಆಪಲ್ ಕಂಪನಿ ಬಿಡುಗಡೆ ಮಾಡಿದೆ.
ಸಾಕಷ್ಟು ವೈಶಿಷ್ಟ್ಯಗಳುಳ್ಳ ಐಫೋನ್ 14 ಕೊಂಡುಕೊಳ್ಳಲು ಗ್ರಾಹಕರು ಕೂಡ ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ 2023ರಲ್ಲಿ 8K ವಿಡಿಯೋ ಹಾಗೂ ಉತ್ತಮ ಬ್ಯಾಟರಿಯೊಂದಿಗೆ ಐಫೋನ್ 15 ಅಲ್ಟ್ರಾ ಬಿಡುಗಡೆ ಮಾಡಲು ಆಪಲ್ ಕಂಪನಿ ಸಜ್ಜಾಗಿದೆ.
iPhone 15 Ultra, ಕೆಲವು ವಿಶೇಷವಾದ ಹಾರ್ಡ್‌ವೇರ್ ಅನ್ನು ಹೊಂದಿರುತ್ತದೆ. 8K ವಿಡಿಯೋ ರೆಕಾರ್ಡಿಂಗ್ ಇದರಲ್ಲಿರುವುದು ಬಹುತೇಕ ಖಚಿತ. ಐಫೋನ್ 15 ಪ್ರೋ ಕೂಡ ಇದೇ ಫೀಚರ್‌ಗಳನ್ನು ಹೊಂದಿರಲಿದೆ ಅಂತಾ ಹೇಳಲಾಗ್ತಿದೆ.
ಅಲ್ಟ್ರಾ ಪ್ರತ್ಯೇಕವಾಗಿ ಪೆರಿಸ್ಕೋಪ್ ಲೆನ್ಸ್ (6x ಅಥವಾ 5x) ಅನ್ನು ಹೊಂದಿರುತ್ತದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಅಲ್ಲದೆ, ಅಲ್ಟ್ರಾ ಸುಧಾರಿತ ಬ್ಯಾಟರಿ ಅವಧಿಯನ್ನು ಹೊಂದಿರುತ್ತದೆ.
ಈ ಎಲ್ಲಾ ವಿಶೇಷ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಬರ್ತಿರೋದ್ರಿಂದ ಐಫೋನ್ 14 ಪ್ರೊ ಮ್ಯಾಕ್ಸ್‌ಗೆ ಹೋಲಿಸಿದರೆ ಐಫೋನ್ 15 ಅಲ್ಟ್ರಾ ಬೆಲೆ ಕೂಡ ಹೆಚ್ಚಾಗುವ ನಿರೀಕ್ಷೆಯಿದೆ. ಈ ಮೊಬೈಲ್‌ನ ಬೆಲೆ 1,100 ರಿಂದ 1,200 ಡಾಲರ್‌ವರೆಗೂ ಇರಬಹುದು.
ಎಲ್ಲಾ iPhone 15 ಮಾದರಿಗಳು USB-C ಸಪೋರ್ಟ್ ಮಾಡಬಹುದು. ಜೊತೆಗೆ ಎಲ್ಲಾ ನಾಲ್ಕು ಮಾದರಿಗಳು ಡೈನಾಮಿಕ್ ಐಲ್ಯಾಂಡ್ ವಿನ್ಯಾಸವನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಅದಾಗ್ಯೂ ಎರಡು ಮಾದರಿಗಳು ವಿಭಿನ್ನ ಶ್ರೇಣಿಯ ಚಿಪ್‌ಸೆಟ್‌ಗಳನ್ನು ಬಳಸುತ್ತವೆ.