ಇಂದು ಪ್ರತಿಯೊಂದು ಸಹ ಆನ್ ಲೈನ್ ಮಯವಾಗಿದೆ. ಇಯರ್ ಬಡ್ ನಂತಹ ಸಣ್ಣಪುಟ್ಟ ವಸ್ತುಗಳಿಂದ ಹಿಡಿದು ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್ ವರೆಗೆ ಎಲ್ಲವೂ ಆನ್ಲೈನ್ ನಲ್ಲಿ ಮಾರಾಟವಾಗುತ್ತವೆ. ಹೋಟೆಲ್ ನಿಂದ ಆಹಾರ ತರಿಸಿಕೊಳ್ಳುವುದೂ ಸಹ ಈಗ ಸುಲಭ.
ಇದರ ಮಧ್ಯೆ ಮದ್ಯವನ್ನು ಸಹ ಆನ್ ಲೈನ್ ಮೂಲಕ ಮಾರಾಟ ಮಾಡಿದರೆ ಅನುಕೂಲಕರ ಎಂಬ ಮಾತುಗಳು ಮದ್ಯಪ್ರಿಯರಿಂದ ಕೇಳಿ ಬರುತ್ತಿತ್ತು. ಅದರಲ್ಲೂ ಲಾಕ್ ಡೌನ್, ಬಂದ್ ಸಂದರ್ಭಗಳಲ್ಲಿ ಅವರುಗಳ ಬೇಡಿಕೆ ನೀಗುತ್ತಿತ್ತು.
ಆದರೆ ಅಬಕಾರಿ ಸಚಿವ ಕೆ. ಗೋಪಾಲಯ್ಯ, ಈ ನಿರೀಕ್ಷೆಗಳಿಗೆ ತೆರೆ ಎಳೆದಿದ್ದು ಆನ್ ಲೈನ್ ಮದ್ಯ ಮಾರಾಟ ಮಾಡುವ ವಿಚಾರದ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಯಾವುದೇ ವ್ಯಾಪಾರವಾದರೂ ಸಹ ಸ್ಥಳೀಯರಿಗೆ ಅನುಕೂಲವಾಗಬೇಕು ಹೀಗಾಗಿ ಆನ್ ಲೈನ್ ಮಾರಾಟ ಮಾಡುವ ಚಿಂತನೆ ಇಲ್ಲ ಎಂದಿದ್ದಾರೆ.