ಹಬ್ಬಗಳು ಬಂತಂದ್ರೆ ಆನ್ ಲೈನ್ ನಲ್ಲಿ ಡಿಸ್ಕೌಂಟ್ ಗಳ ಸುಗ್ಗಿ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್, ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ, ಸ್ನಾಪ್ ಡೀಲ್ ಅನ್ ಬಾಕ್ಸ್ ದಿವಾಳಿ ಸೇಲ್ ಹೀಗೆ ಒಂದಕ್ಕಿಂತ ಒಂದು ಬಂಪರ್ ಕೊಡುಗೆಗಳಿರುತ್ತವೆ. ಅವುಗಳಲ್ಲಿ ಯಾವುದು ಬೆಸ್ಟ್, ಒಳ್ಳೆ ಡಿಸ್ಕೌಂಟ್ ಯಾವುದರಲ್ಲಿ, ಯಾವ ಸಮಯದಲ್ಲಿದೆ? ಅನ್ನೋದು ಗ್ರಾಹಕರ ಗೊಂದಲ. ಹಾಗಾಗಿ ಆನ್ ಲೈನ್ ಶಾಪಿಂಗ್ ಗೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.
1. ವೇಳಾಪಟ್ಟಿ ನೋಡಿಕೊಳ್ಳಿ, ವೇಗವಾಗಿ ಖರೀದಿ ಆರಂಭಿಸಿ
ಬೆಸ್ಟ್ ಡೀಲ್ ಗಳು ಯಾವ ದಿನಾಂಕದಂದು, ಯಾವ ಸಮಯದಲ್ಲಿವೆ ಅನ್ನೋದನ್ನು ತಿಳಿದುಕೊಳ್ಳಿ. ಉದಾಹರಣೆಗೆ ಅಮೆಜಾನ್ ನಲ್ಲಿ ಬಂಪರ್ ಕೊಡುಗೆಗಳಿರೋದು ಮಧ್ಯರಾತ್ರಿ. ಹಾಗಾಗಿ ಆ ಸಮಯದಲ್ಲೇ ನೀವು ಶಾಪಿಂಗ್ ಮಾಡೋದು ಬೆಸ್ಟ್.
BIG NEWS: ಒಮಿಕ್ರಾನ್ ಹೊತ್ತಲ್ಲೇ ಮತ್ತೊಂದು ಶಾಕ್; ನಿಯೋಕೋವ್ ಹೊಸ ವೈರಸ್ ಪತ್ತೆ
2. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಿ
ಬಹುತೇಕ ಬ್ಯಾಂಕ್ ಗಳಿಂದ ಆನ್ ಲೈನ್ ಖರೀದಿ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಗಳಿರುತ್ತವೆ. ಹಾಗಾಗಿ ನೀವು ಅವುಗಳ ಲಾಭ ಪಡೆದುಕೊಳ್ಳಬೇಕು. ನಿರ್ಲಕ್ಷಿಸಿದ್ದ ಬ್ಯಾಂಕ್ ಮೇಲ್ ಗಳನ್ನೆಲ್ಲ ಚೆಕ್ ಮಾಡಿ, ಯಾವುದರಲ್ಲಿ ಒಳ್ಳೆ ಆಫರ್ ಇದೆ ಅನ್ನೋದನು ಪರಿಶೀಲಿಸಿಕೊಳ್ಳಿ.
3. ಉತ್ಪನ್ನಗಳನ್ನು ವೀಕ್ಷಿಸಿದ ಮೊದಲನೆಯವರು ಎನಿಸಿಕೊಳ್ಳಿ
ಮಧ್ಯರಾತ್ರಿ ಲ್ಯಾಪ್ ಟಾಪ್ ಅಥವಾ ಮೊಬೈಲ್ ಆನ್ ಮಾಡಿಕೊಂಡು ಆನ್ ಲೈನ್ ಶಾಪಿಂಗ್ ಗೆ ಕುಳಿತವನು ನಾನೊಬ್ಬನೇ ಇರಬಹುದು ಎಂದುಕೊಳ್ಳಬೇಡಿ. ಲಕ್ಷಾಂತರ ಮಂದಿ ಇಂತಹ ಆಫರ್ ಗಳಿಗಾಗಿ ಕಾದು ಕುಳಿತಿರುತ್ತಾರೆ. ಹಾಗಾಗಿ ಅಮೆಜಾನ್ ಪ್ರೈಮ್ ನಂತಹ ಆಫರ್ ಗಳಿಗೆ ಸೈನ್ ಇನ್ ಆಗಿ. ಹಾಗಾದಲ್ಲಿ ನೀವು 30 ನಿಮಿಷ ಮೊದಲೇ ಉತ್ಪನ್ನಗಳನ್ನು ವೀಕ್ಷಿಸಬಹುದು.
4. ಉತ್ಪನ್ನ ಖರೀದಿಸುವ ಮುನ್ನ ವಿಮರ್ಶೆಗಳನ್ನು ತಪ್ಪದೆ ಓದಿ
ಇಂತಹ ಡಿಸ್ಕೌಂಟ್ ಬಗ್ಗೆ ಎಲ್ಲರಿಗೂ ಕ್ರೇಝ್ ಸಾಮಾನ್ಯ. ಆ ಉತ್ಸಾಹದಲ್ಲಿ ನಮಗೆ ಬೇಡವಾಗಿದ್ದನ್ನೂ ಖರೀದಿಸಿಬಿಡುತ್ತೇವೆ. ಯಾವುದೇ ಫ್ಯಾನ್ಸಿ ಐಟಂ ಆಗಿದ್ದಲ್ಲಿ ಅದರ ಬಗ್ಗೆ ಗ್ರಾಹಕರ ವಿಮರ್ಶೆ ಏನಿದೆ ಅನ್ನೋದನ್ನು ಗಮನಿಸಿ, ಅದು ನಿಮಗೆ ಬೇಕೋ ಬೇಡವೋ ಅನ್ನೋದನ್ನು ನಿರ್ಧರಿಸಿ.
5. ಶಿಪ್ಪಿಂಗ್ ಶುಲ್ಕದ ಬಗ್ಗೆ ಗಮನವಿರಲಿ
ಕೆಲವು ಸೈಟ್ ಗಳಲ್ಲಿ ಭರ್ಜರಿ ಕೊಡುಗೆಗಳಿರುತ್ತವೆ, ಅದರ ಜೊತೆಜೊತೆಗೆ ಶಿಪ್ಪಿಂಗ್ ಶುಲ್ಕ ಕೂಡ ಹೆಚ್ಚಾಗಿರುತ್ತದೆ. ಶಿಪ್ಪಿಂಗ್ ಶುಲ್ಕ ಜಾಸ್ತಿ ಮಾಡಿ, ಡಿಸ್ಕೌಂಟ್ ಕೊಟ್ಟಂತೆ ಮಾಡಿ ನಿಮ್ಮನ್ನು ಮೂರ್ಖರನ್ನಾಗಿಸುವ ವೆಬ್ ಸೈಟ್ ಗಳ ಬಗ್ಗೆ ಜಾಗೃತೆ ವಹಿಸಿ.
6. ಯಾವ ವಸ್ತು ಬೇಕೋ ಅದನ್ನೇ ನೋಡಿ
ಬೆಸ್ಟ್ ಡೀಲ್ ಗಳಲ್ಲಿದೆ ಅನ್ನೋ ಕಾರಣಕ್ಕೆ ನಿಮಗೆ ಬೇಡದ ಉತ್ಪನ್ನಗಳನ್ನೆಲ್ಲ ನೋಡುತ್ತ ಸಮಯ ವ್ಯರ್ಥ ಮಾಡಬೇಡಿ. ಬೆಲೆ ಹೆಚ್ಚು ಅನ್ನೋ ಕಾರಣಕ್ಕೆ ಕೆಲ ತಿಂಗಳುಗಳಿಂದ ನಿಮಗೆ ಬೇಕಾಗಿದ್ದರೂ ಖರೀದಿಸದೇ ಇದ್ದ ಉತ್ಪನ್ನದ ಬಗ್ಗೆ ಗಮನಹರಿಸಿ.
7. ಖರೀದಿ ಮೇಲೆ ಹೆಚ್ಚುವರಿ ಕ್ಯಾಶ್ ಬ್ಯಾಕ್ ಪಡೆಯಿರಿ.
ಪ್ರತಿ ಬಾರಿ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಾಗ್ಲೂ ಕೂಪನ್ ದುನಿಯಾದಲ್ಲಿ ಕ್ಯಾಶ್ ಬ್ಯಾಕ್ ಆಫರ್ ಗಳಿರುತ್ತವೆ. ದೀಪಾವಳಿ ಸೇಲ್ಸ್ ನಲ್ಲಿ ಖರೀದಿಸುತ್ತೀರಾ ಎಂದಾದಲ್ಲಿ ಕೂಪನ್ ದುನಿಯಾದ ಆಫರ್ ಬಳಸಿಕೊಳ್ಳಿ. ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ನಲ್ಲಿ ನಿಮಗೆ ಎಷ್ಟು ಮೊತ್ತದ ಕ್ಯಾಶ್ ಬ್ಯಾಕ್ ಸಿಗುತ್ತದೆ ಅನ್ನೋದನ್ನು ಕೂಪನ್ ದುನಿಯಾ ಪೇಜ್ ನಲ್ಲಿ ತಿಳಿದುಕೊಳ್ಳಬಹುದು. ಅಮೆಜಾನ್ ನಲ್ಲಿ ಗಿಫ್ಟ್ ಕಾರ್ಡ್ ಗೆಲ್ಲುವ ಚಾನ್ಸ್ ಕೂಡ ಇರುತ್ತದೆ.