’ಭಾರತದ ಪೆನ್ಸಿಲ್ ಗ್ರಾಮ’ ಎಂದೇ ಕರೆಯಲಾಗುವ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಉಹ್ಕೂ ಗ್ರಾಮ ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಾಂಕ್ರಾಮಿಕದಿಂದಾಗಿ ಶಿಕ್ಷಣ ವ್ಯವಸ್ಥೆ ಆನ್ಲೈನ್‌ನತ್ತ ಹೊರಳುತ್ತಿರುವ ಕಾರಣ ಪೆನ್ಸಿಲ್‌ಗಳಿಗೆ ಮೊದಲಿದ್ದ ಡಿಮ್ಯಾಂಡ್ ಇಲ್ಲದಂತಾಗಿದೆ.
ದೇಶದಲ್ಲಿ ಉತ್ಪಾದನೆಯಾಗುವ 90% ಪೆನ್ಸಿಲ್‌ಗಳಿಗೆ ಈ ಊರಿನದ್ದೇ ಮರ ಸಾಗಾಟವಾಗುತ್ತದೆ. ಆದರೆ ಕೋವಿಡ್ ಕಾರಣದಿಂದ ಪೆನ್ಸಿಲ್ ಬೇಡಿಕೆಯು 70%ನಷ್ಟು ಇಳಿಕೆಯಾಗಿರುವ ಕಾರಣ ಈ ವೃತ್ತಿಯನ್ನೇ ನಂಬಿಕೊಂಡಿರುವ ಕಾರ್ಮಿಕರ ಪೈಕಿ 50%ನಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ.
ಕೋವಿಡ್ ಸಾಂಕ್ರಮಿಕಕ್ಕೂ ಮುನ್ನ, ಪುಲ್ವಾಮಾ ಜಿಲ್ಲೆಯೊಂದರಲ್ಲೇ 17 ಪೆನ್ಸಿಲ್ ಕಾರ್ಖಾನೆಗಳಲ್ಲಿ 4,000ಕ್ಕೂ ಹೆಚ್ಚಿನ ಮಂದಿ ಕೆಲಸ ಮಾಡುತ್ತಿದ್ದರು. ಇದರಿಂದ 300ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಬೇಡಿಕೆಯಲ್ಲಿ ದಿಢೀರ್ ಕುಸಿತ ಕಂಡು ಬಂದ ಕಾರಣ ಈ ಕಾರ್ಖಾನೆಗಳು ತಮ್ಮ ಅರ್ಧದಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವಂತೆ ಆಗಿದೆ.
ಪ್ರತಿದಿನ ಈ ಯೋಗಾಸನ ಮಾಡಿದರೆ ನಿಮ್ಮನ್ನು ಕಾಡಲ್ಲ ಕೂದಲುದುರುವ ಸಮಸ್ಯೆ
ಇಂಥ ಪೆನ್ಸಿಲ್ ಕಾರ್ಖಾನೆಯೊಂದರ ಮಾಲೀಕ ಮನ್ಜೂರ್ ಅಹ್ಮದ್ ಅಲಾಹಿ ಮಾತನಾಡಿ, “ಕಾಶ್ಮೀರದ ಕಚ್ಛಾ ವಸ್ತು ಉತ್ಕೃಷ್ಟ ಗುಣಮಟ್ಟದ್ದಾಗಿರುವ ಕಾರಣ ದೇಶದ ಅಗ್ರ ಪೆನ್ಸಿಲ್ ಉತ್ಪಾದಕರಾದ ಅಪ್ಸರಾ, ನಟ್ರಾಜ್ ಥರದ ಕಂಪನಿಗಳೆಲ್ಲಾ ಇಲ್ಲಿನ ಮರವನ್ನೇ ಬಳಸುತ್ತವೆ. ಭಾರತವಲ್ಲದೇ 83 ದೇಶಗಳಿಗೆ ನಮ್ಮ ಕಂಪನಿಗಳು ಪೆನ್ಸಿಲ್ ತಯಾರಿಸಿ ಕಳುಹಿಸುತ್ತವೆ. ಇದಕ್ಕೂ ಮುನ್ನ ಚೀನಾದಿಂದ ಬರುತ್ತಿದ್ದ ಕಚ್ಛಾವಸ್ತುಗಳೆಲ್ಲಾ ಈಗ ಇಲ್ಲಿಂದಲೇ ಹೋಗುತ್ತವೆ,’’ ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಇಂಥ ಮುಗ್ಗಟ್ಟಿಗೆ ಸಿಲುಕಿದ್ದಾಗಿ ತಿಳಿಸಿದ ಮನ್ಜೂರ್, “ಕೋವಿಡ್‌ನಿಂದ ಭಾರೀ ಸಮಸ್ಯೆಗಳು ಸೃಷ್ಟಿಯಾಗಿದ್ದು, ನಮ್ಮ ಉದ್ಯಮಕ್ಕೆ ಕೆಟ್ಟದಾಗಿ ಪರಿಣಾಮ ಬೀರಿದೆ. ಕೋವಿಡ್‌ಗೂ ಮುನ್ನ ಒಂದು ಕೋಟಿ ರೂಪಾಯಿಯ ವಹಿವಾಟು ನಡೆಯುತ್ತಿದ್ದರೆ ಈಗ 30 ಲಕ್ಷ ರೂಪಾಯಿಯ ವ್ಯಾಪಾರವಷ್ಟೇ ನಡೆಯುತ್ತಿದೆ. ಕೋವಿಡ್ ಕೇವಲ ಒಂದು ರಾಜ್ಯದಲ್ಲಿ ಮಾತ್ರವಲ್ಲ, ಇಡೀ ಜಗತ್ತಿಗೇ ಹಬ್ಬಿದೆ. ಜಗತ್ತಿನೆಲ್ಲೆಡೆ ಶಾಲೆಗಳು ಮುಚ್ಚಿದ್ದವು. ಕೋವಿಡ್‌ಗೂ ಮುನ್ನ ನಮ್ಮಲ್ಲಿ 150 ಕಾರ್ಮಿಕರು ಇದ್ದರು. ಆದರೆ ಈಗ ಅದರ 30%ನಷ್ಟು ಮಾತ್ರವೇ ಇದ್ದಾರೆ. ಶಾಲೆಗಳು ಮರು ಆರಂಭವಾಗುವ ನಿರೀಕ್ಷೆ ಇದೆ. ಆದರೆ ಕೋವಿಡ್‌ನಿಂದಾಗಿ ನಾವು ಬಹಳ ಸಂಕಷ್ಟದಲ್ಲಿ ಸಿಲುಕಿದ್ದೇವೆ,” ಎನ್ನುತ್ತಾರೆ.
ಕೊಹ್ಲಿ ಯಾವಾಗಲೂ ನಮ್ಮ ಲೀಡರ್ ಎಂದ ರೋಹಿತ್ ಶರ್ಮಾ
ಪೆನ್ಸಿಲ್ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ಈ ಗ್ರಾಮವನ್ನು ಅಭಿವೃದ್ಧಿಪಡಿಸುವುದಾಗಿ ಗೃಹ ಸಚಿವಾಲಯದ ಇತ್ತೀಚಿನ ವರದಿಯೊಂದು ತಿಳಿಸಿತ್ತು.
ಇದೇ ವಿಚಾರವಾಗಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಒಂದು ಕಾಲದಲ್ಲಿ ನಾವು ಪೆನ್ಸಿಲ್‌ಗಳಿಗಾಗಿ ಮರವನ್ನು ಆಮದು ಮಾಡಿಕೊಳ್ಳುತ್ತಿದ್ದೆವು, ಆದರೆ ಈಗ ನಮ್ಮದೇ ಪುಲ್ವಾಮಾ, ದೇಶವನ್ನು ಪೆನ್ಸಿಲ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಮಾಡುತ್ತಿದೆ,” ಎಂದಿದ್ದರು.