ಕೋವಿಡ್-19 ಕಾಲಿಟ್ಟ ನಂತರ ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿ ಶುರುವಾಗಿರೋದು ತಿಳಿದದ್ದೇ. ಆದರೆ, ಇದರಿಂದ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದೆ. ಮಕ್ಕಳು ಇಂಟರ್ನೆಟ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ತನ್ನ ಮಕ್ಕಳು ಆನ್ಲೈನ್ ನಲ್ಲಿ ಜಾಸ್ತಿ ಕಾಲ ಕಳೆಯುತ್ತಾರೆ ಎಂದು ಬುದ್ಧಿ ಕಲಿಸಲು ಹೋದ ತಂದೆ ಮಾಡಿರುವ ಅವಾಂತರ ಕೇಳಿದ್ರೆ ಶಾಕ್ ಆಗ್ತೀರಾ..!
ತನ್ನ ಮಕ್ಕಳು ಆನ್ಲೈನ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆಂದು ಕೋಪಗೊಂಡ ಮಹಾಶಯನೊಬ್ಬ ಇಡೀ ಪಟ್ಟಣದ ಇಂಟರ್ನೆಟ್ ಸಂಪರ್ಕವನ್ನು ಆಕಸ್ಮಿಕವಾಗಿ ಸ್ಫೋಟಿಸಿರುವ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಇದೀಗ ಆತ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗಿದೆ.
ಮೆಸೇಂಜಸ್ ಪಟ್ಟಣದಲ್ಲಿರುವ ತನ್ನ ನಿವಾಸದಲ್ಲಿ ಇಂಟರ್‌ನೆಟ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲು ಮಲ್ಟಿ-ವೇವ್ ಬ್ಯಾಂಡ್ ಜಾಮರ್ ಅನ್ನು ತಂದೆ ಬಳಸಲು ಪ್ರಯತ್ನಿಸಿದ್ದಾರೆ. ಫ್ರಾನ್ಸ್‌ನಲ್ಲಿ ಕಾನೂನುಬಾಹಿರವಾಗಿರುವ ಜಾಮರ್‌ಗಳು ದೂರಸಂಪರ್ಕ ಸಂಕೇತಗಳೊಂದಿಗೆ ಕೆಲಸ ಮಾಡುತ್ತವೆ. ಹೀಗಾಗಿ ಸಂಪರ್ಕಗಳನ್ನು ಕುಂಠಿತಗೊಳಿಸುತ್ತವೆ.
ತನ್ನ ಮನೆಯ ಇಂಟರ್ನೆಟ್ ಸಂಪರ್ಕ ಕಡಿತ ಮಾಡಲು ಹೋದ ತಂದೆ ಇದೀಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಇದೀಗ ಆತ ಆರು ತಿಂಗಳ ಜೈಲು ಶಿಕ್ಷೆ ಮತ್ತು 30,000 ಯುರೋಗಳ ದಂಡವನ್ನು ಎದುರಿಸಬೇಕಾಗಿದೆ.