ಜನರ ಗುಂಪೊಂದು ಆನೆಗಳ ಹಿಂಡಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಜನರು ರಸ್ತೆ ದಾಟಲು ಪ್ರಯತ್ನಿಸುತ್ತಿರುವ ಜಂಬೋ ಹಿಂಡಿನ ಹತ್ತಿರ ವಾಹನಗಳನ್ನು ನಿಲ್ಲಿಸಿ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡುಬಂದಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೆಟ್ಟಿಗರನ್ನು ಕೆರಳಿಸಿದೆ.
ಹೌದು, ಆನೆಗಳ ಹಿಂಡಿನ ಜೊತೆ ಫೋಟೋಗಳನ್ನು ಕ್ಲಿಕ್ಕಿಸಲು ಗುಂಪೊಂದು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದಾರೆ. ಸೆಲ್ಫಿ ಕ್ಲಿಕ್ಕಿಸುತ್ತಾ ಇಬ್ಬರು ಹಿಂಡಿನ ಹತ್ತಿರ ಹೋಗಿದ್ದಾರೆ. ಈ ವೇಳೆ ಒಂದು ಆನೆ ಉದ್ರೇಕಗೊಂಡಿದೆ. ಈ ವೇಳೆ ಉಳಿದ ಆನೆಗಳು ಕೂಡ ಅದರೊಂದಿಗೆ ಸೇರಿಕೊಂಡು ಬೆನ್ನಟ್ಟಲು ಮುಂದಾಗಿದೆ. ಈ ವೇಳೆ ಅವರು ಭಯದಿಂದ ಓಡಿದ್ದಾರೆ. ಅದೃಷ್ಟವಶಾತ್ ಆನೆಗಳು ದಾಳಿ ಮಾಡುವ ಮನಸ್ಸು ಮಾಡದೇ ಇದ್ದಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿರುವ ವಿಡಿಯೋಗೆ, ವನ್ಯಜೀವಿಗಳೊಂದಿಗೆ ಸೆಲ್ಫಿ ಕ್ರೇಜ್ ಕೆಲವೊಮ್ಮೆ ಪ್ರಾಣಕ್ಕೆ ಎರವಾಗಬಹುದು. ಈ ಜನರು ಅದೃಷ್ಟವಂತರಾಗಿದ್ದಾರೆ. ದೈತ್ಯ ಜೀವಿಗಳಾಗಿದ್ದರೂ ಸೌಮ್ಯ ಪ್ರಾಣಿಗಳಾಗಿರುವುದರಿಂದ ದಾಳಿ ಮಾಡಲು ಮನಸ್ಸು ತೋರಿಲ್ಲ. ಬಲಿಷ್ಠ ಆನೆಗಳು ಜನರಿಗೆ ಪಾಠ ಕಲಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, 63 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವಾರು ಕಾಮೆಂಟ್ಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.indiatoday.in/trending-news/story/people-stop-car-midway-to-take-selfie-with-elephant-herd-what-happens-next-will-scare-you-1984831-2022-08-07
https://twitter.com/itsoutrageeyash/status/1555807756703404032?ref_src=twsrc%5Etfw%7Ctwcamp%5Etweetembed%7Ctwterm%5E1555807756703404032%7Ctwgr%5Ee1db97e67965a9badf64e93262e88eef36c3aa36%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpeople-stop-car-midway-to-take-selfie-with-elephant-herd-what-happens-next-will-scare-you-1984831-2022-08-07