ಹ್ಯಾಟ್ರಿಕ್ ಹೀರೋ ಶಿವಾರಾಜ್ ಕುಮಾರ್ ಹಾಗೂ ಸುಧಾರಾಣಿ ನಟನೆಯ ಆನಂದ್ ಚಿತ್ರ ಬಿಡುಗಡೆಯಾಗಿ ಇಂದಿಗೆ 35 ವರ್ಷ ಕಳೆದಿದೆ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲನೇ ಚಿತ್ರವಿದು, ಬಾಲನಟಿಯಾಗಿ ನಟಿಸುತ್ತಿದ್ದ ಸುಧಾರಾಣಿ ನಾಯಕಿಯಾಗಿ ಅಭಿನಯಿಸಿದ ಮೊದಲನೇ ಸಿನಿಮಾ ಇದಾಗಿತ್ತು.ಮೊದಲ ಚಿತ್ರದಲ್ಲೇ ಇಬ್ಬರಿಗೂ ಭರ್ಜರಿ ಯಶಸ್ಸು ಸಿಕ್ಕಿತು.
ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ಆಶಿಷ್ ವಿದ್ಯಾರ್ಥಿ
ಸಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಈ ಚಿತ್ರವನ್ನು ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಜಯಶ್ರೀ ಸೇರಿದಂತೆ ತೂಗುದೀಪ ಶ್ರೀನಿವಾಸ್, ಬಾಲರಾಜ್, ಚಿ ಗುರುದತ್, ತಾರಾ, ಚಿ ಉದಯಶಂಕರ್, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು ಇಂದು 35 ವರ್ಷ ಪೂರೈಸಿದ ಈ ಸಂತಸವನ್ನು ಸುಧಾರಾಣಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CQTDkmzHbbM/?utm_source=ig_web_copy_link