ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ರಕ್ತಪಾತದ ವಿರುದ್ಧ ಜನರು ಧ್ವನಿಯೆತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇವೆ. ಈ ಮಧ್ಯೆ ಉದ್ಯಮಿ ಆನಂದ್ ಮಹಿಂದ್ರಾ, ಉಕ್ರೇನ್ ಸೇನೆ ನೇಮಕಾತಿಗೆ ಸಂಬಂಧಪಟ್ಟ ಹಳೆಯ ಜಾಹೀರಾತಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ಸೇನೆಯ ಸಮವಸ್ತ್ರದಲ್ಲಿರುವ ವ್ಯಕ್ತಿ ನಾನೊಬ್ಬ ತಂದೆ ಎಂದು ಹೇಳುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ನಂತರ ಈ ವಿಡಿಯೋದಲ್ಲಿ ವಿವಿಧ ವೃತ್ತಿಗಳು ಮತ್ತು ಹಿನ್ನೆಲೆಯ ಜನರು ಸೈನ್ಯಕ್ಕೆ ಹೇಗೆ ಸೇರಿದ್ದಾರೆ ಎಂಬುದನ್ನು ತೋರಿಸಲಾಗಿದೆ.
“ನಾವು ಯಾರೂ ಯುದ್ಧಕ್ಕಾಗಿ ಹುಟ್ಟಿಲ್ಲ, ಆದರೆ ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಲು ಇಲ್ಲಿದ್ದೇವೆ” ಎಂಬ ವಾಕ್ಯದೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಈ ವಿಡಿಯೋವನ್ನು 2014ರಲ್ಲಿ ಚಿತ್ರೀಕರಿಸಲಾಗಿತ್ತು. ರಷ್ಯಾ ಜೊತೆಗಿನ ಸಂಘರ್ಷ ತಾರಕಕ್ಕೇರಿರೋ ಈ ಸಮಯದಲ್ಲಿ ಸೇನೆಯ ವಿಡಿಯೋ ಅತ್ಯಂತ ಸಮಂಜಸವೆನಿಸಿದೆ. 30 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಉಕ್ರೇನ್ ನಾಗರಿಕರ ರಾಷ್ಟ್ರಭಕ್ತಿಯನ್ನು ಕೊಂಡಾಡಿದ್ದಾರೆ.
https://twitter.com/anandmahindra/status/1497803850069475328?ref_src=twsrc%5Etfw%7Ctwcamp%5Etweetembed%7Ctwterm%5E1497803850069475328%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2F