ಪಾನ್ ಕಾರ್ಡ್ ಹೊಂದಿರುವವರು ಮಾರ್ಚ್ 31 ರ ಒಳಗಾಗಿ ಪಾನ್ ಕಾರ್ಡ್ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ಸೂಚಿಸಲಾಗಿದೆ. ಈ ಗಡುವಿನ ಒಳಗಾಗಿ ನೀವು ಆಧಾರ್ ಕಾರ್ಡ್ನೊಂದಿಗೆ ಪಾನ್ ಲಿಂಕ್ ಮಾಡದೇ ಇದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲೂಬಹುದು.
ಈ ಡೆಡ್ಲೈನ್ ಮುಗಿದ ಬಳಿಕ ನೀವು ಆಧಾರ್ನೊಂದಿಗೆ ಪಾನ್ ಲಿಂಕ್ ಮಾಡಬೇಕು ಎಂದರೆ 1000 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಅಲ್ಲದೇ ನಿಮಗೆ ಮ್ಯೂಚುವಲ್ ಫಂಡ್, ಸ್ಟಾಕ್ಗಳು, ಓಪನ್ ಬ್ಯಾಂಕ್ ಖಾತೆಗಳಿಗೆ ಪಾನ್ ಕಾರ್ಡ್ಗಳು ಅವಶ್ಯಕವಾಗಿ ಬೇಕಾಗಿರುವುದರಿಂದ ಇಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ .
ಹಾಗಾದರೆ ಆಧಾರ್ನೊಂದಿಗೆ ಪಾನ್ ಕಾರ್ಡ್ನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ :
ಮೊದಲು ಆದಾಯ ತೆರಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ.
ಇಲ್ಲಿ ನಿಮ್ಮ ಹೆಸರು, ಪಾನ್ ಸಂಖ್ಯೆ, ಆಧಾರ್ ಸಂಖ್ಯೆಯನ್ನು ನಮೂದಿಸಿ.
ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ನೀಡಿದರೆ ಸ್ಕ್ವೈರ್ ಮೇಲೆ ಟಿಕ್ ಮಾಡಿ.
ಕ್ಯಾಪ್ಚಾ ಕೋಡ್ನ್ನು ನಮೂದಿಸಿ.
ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದೀಗ ನಿಮ್ಮ ಪಾನ್ ಖಾತೆಯು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಲಿದೆ.
ಎಸ್ಎಂಎಸ್ ಮೂಲಕ ಪಾನ್ ಕಾರ್ಡ್ನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಈ ರೀತಿ ಮಾಡಿ :
ನಿಮ್ಮ ಫೋನ್ನಲ್ಲಿ UIDPAN ಎಂದು ಟೈಪ್ ಮಾಡಿ. ಇದಾದ ಬಳಿಕ ನಿಮ್ಮ 12 ಸಂಖ್ಯೆಗಳ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ .
ಇದಾದ ಬಳಿಕ 10 ಸಂಖ್ಯೆಗಳ ಪಾನ್ ಸಂಖ್ಯೆಯನ್ನು ನಮೂದಿಸಿ. ಇದಾದ ಬಳಿಕ ಈ ಮೆಸೇಜ್ನ್ನು 567678ಗೆ ಕಳುಹಿಸಿ ಅಥವಾ 56161ಗೂ ಕಳುಹಿಸಬಹುದು.