ಮುಂಬೈನಲ್ಲಿ 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಗರದ ಹಿಂದ್ಮಾತ ಪ್ರದೇಶದಲ್ಲಿರುವ ನಿವಾಸದಲ್ಲಿ ಭಾನುವಾರದಂದು ಈ ಘಟನೆ ನಡೆದಿದೆ. ಮೃತ ಬಾಲಕ ಆನ್‌ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದ ಎಂದು ಹೇಳಲಾಗುತ್ತಿದ್ದು, ಆ ಆಟದ ಟಾಸ್ಕ್ ಅಥವಾ ಸವಾಲಿನ ಭಾಗವಾಗಿ ಹುಡುಗ ಈ ನಿರ್ಧಾರಕ್ಕೆ ಬಂದನೆ ಎಂದು ಬೊಯ್ವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏಳನೇ ತರಗತಿಯಲ್ಲಿದ್ದ ಮೃತ ಬಾಲಕ ಗನೇರಾ ಫ್ರೀ ಫೈಯರ್ ಎಂಬ ರಾಯಲ್ ಬ್ಯಾಟಲ್ ಗ್ರೌಂಡ್ ಗೇಮ್ಗೆ ಅಡಿಕ್ಟ್ ಆಗಿದ್ದ. ಸೋಮವಾರದಂದು ಕೇಂದ್ರ ಸರ್ಕಾರ ಇದನ್ನು ಉಳಿದ ಮೊಬೈಲ್ ಅಪ್ಲಿಕೇಶನ್ ಗಳೊಂದಿಗೆ ಬ್ಯಾನ್ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ನೌಕರನಾಗಿರುವ ಬಾಲಕನ ತಂದೆಗೆ ಭಾನುವಾರ ಸಂಜೆ ಸುಮಾರು 7:22ಕ್ಕೆ ಆತನಿಂದ ಫೋನ್ ಕರೆ ಬಂದಿದೆ. ಈ ವೇಳೆ ತಮ್ಮ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದ ಅವರಿಗೆ ಕರೆ ಸ್ವೀಕರಿಸಲು ಸಾಧ್ಯವಾಗಿಲ್ಲ. ಕೆಲ ಸಮಯದ ನಂತರ ಪುನಃ ಆತನಿಗೆ ಕರೆ ಮಾಡಿದಾಗ ಉತ್ತರಿಸಿಲ್ಲ.
ಮನೆಗೆ ಮರಳಿದ ಪೋಷಕರು, ಹುಡುಗನ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನ ಗಮನಿಸಿದ್ದಾರೆ. ಅನುಮಾನಗೊಂಡು ಅವರು ಬಾಗಿಲ ಮೇಲಿದ್ದ ಗ್ಲಾಸ್ ಫ್ರೇಮ್ ಒಡೆದು ಬಾಗಿಲು ತೆರೆದಿದ್ದಾರೆ. ಬಾಗಿಲು ತೆರೆದು ನೋಡಿದಾಗ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ದುಃಖದ ನಡುವೆಯೂ ಪೋಷಕರು ನಮಗೆ ಮಾಹಿತಿ ನೀಡಿದರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಹುಡುಗ ಫ್ರೀ ಫೈಯರ್ ಎಂಬ ಆನ್ ಲೈನ್ ಗೇಮ್ಗೆ ಅಡಿಕ್ಟ್ ಆಗಿದ್ದ ಎಂದು ತಿಳಿದು ಬಂದಿದೆ. ಆದರೆ ಆತ ಆತ್ಮಹತ್ಯೆಯಂತ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎಂಬುದು ಇನ್ನು ತಿಳಿದಿಲ್ಲಾ.
ಆತನ ಶಿಕ್ಷಕರು ಹಾಗೂ ಪೋಷಕರ ಪ್ರಕಾರ, ಅವನಿಗೆ ಗೇಮ್ ಆಡುವ ಬಯಕೆ ಇತ್ತಾದರೂ ಅದು ಅಡಿಕ್ಷನ್ ಎನ್ನುವ ಮಟ್ಟಕ್ಕೆ ಹೋಗಿರಲಿಲ್ಲ. ಆದರೆ ಫ್ರೀ ಫೈಯರ್ ಗೇಮ್ ಅನ್ನು ಒಬ್ಬರೇ ಆಡಲೂ ಸಾಧ್ಯವಿಲ್ಲ ಗುಂಪಿನಲ್ಲಿ ಆಡಬೇಕು ಬಹುಶಃ ಆತನ ಗೇಮಿಂಗ್ ಸ್ನೇಹಿತರನ್ನ ವಿಚಾರಿಸಿದಾಗ ಏನಾದರೂ ಮಾಹಿತಿ ತಿಳಿಯಬಹುದು ಎಂದು ಡಿಸಿಪಿ ವಿಜಯ್ ಪಾಟೀಲ್ ತಿಳಿಸಿದ್ದಾರೆ.
ಹುಡುಗನ ಮೊಬೈಲನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ. ಸಧ್ಯಕ್ಕೆ ಸಿಕ್ಕಿರುವ ಡೇಟಾ ಪ್ರಕಾರ ಹುಡುಗ ಆನ್ಲೈನ್ ಗೇಮ್ ಹಾಗೂ ಕ್ರಿಕೆಟ್ ಬಗ್ಗೆ ಹೆಚ್ಚು ಬ್ರೌಸ್ ಮಾಡಿದ್ದಾನೆ.
ಆದರೆ ಗೇಮಿಂಗ್ ನ ಸರ್ವರ್ ಸಿಂಗಾಪುರದಲ್ಲಿ ಲೋಕೇಟ್ ಆಗಿರುವುದರಿಂದ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಡೆತ್ ನೋಟ್ ದೊರೆತಿಲ್ಲ. ಅವನ ಗೆಳೆಯರೊಂದಿಗಿನ ಸಂಭಾಷಣೆಯಲ್ಲೂ ಅನುಮಾನ ಪಡುವಂತಾ ಯಾವುದೇ ಘಟನೆ ನಡೆದಿಲ್ಲಾ ಎಂದು ಡಿಸಿಪಿ ವಿಜಯ್ ಪಾಟೀಲ್ ತಿಳಿಸಿದ್ದಾರೆ.