ಉತ್ತರ ಪ್ರದೇಶದಲ್ಲಿ ಚಾಲಕನೊಬ್ಬ ಶಾಲಾ ಮಕ್ಕಳನ್ನು ಆಟೋ ರಿಕ್ಷಾದ ಮೇಲ್ಭಾಗದಲ್ಲಿ ಕೂರಿಸಿಕೊಂಡು ಮನೆಗೆ ಕರೆದೊಯ್ದಿರೋ ವಿಡಿಯೋ ವೈರಲ್ ಆಗಿದೆ.
ಇದು ಬರೇಲಿಯ ನಕಾಟಿಯಾ ಪ್ರದೇಶದಲ್ಲಿ ನಡೆದಿರುವ ಘಟನೆ ಅಂತಾ ಹೇಳಲಾಗ್ತಿದೆ. ಆಟೋ ರಿಕ್ಷಾದ ಟಾಪ್ನಲ್ಲಿ ಕುಳಿತಿರೋ ಶಾಲಾ ಮಕ್ಕಳೆಲ್ಲ 11-13 ವರ್ಷ ವಯಸ್ಸಿವರು.
ವಿಡಿಯೋ ಗಮನಿಸಿದ ಬರೇಲಿ ಪೊಲೀಸರು ಆಟೋ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಧರಿಸಿರುವ ಮೂವರು ವಿದ್ಯಾರ್ಥಿಗಳು ಆಟೋದ ಮೇಲ್ಭಾಗದಲ್ಲಿ ಕುಳಿತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಚಾಲಕ ಸಿಕ್ಕಾಪಟ್ಟೆ ವೇಗವಾಗಿ ಆಟೋ ಚಲಾಯಿಸಿರುವುದು ಕೂಡ ಬೆಳಕಿಗೆ ಬಂದಿದೆ.
ಈ ರೀತಿ ಮಕ್ಕಳನ್ನು ರಿಕ್ಷಾದ ಮೇಲೆ ಕೂರಿಸುವುದು ಅಪಾಯಕಾರಿ. ಸ್ವಲ್ಪ ಯಾಮಾರಿದ್ರೂ ಮಕ್ಕಳ ಪ್ರಾಣಕ್ಕೇ ಅಪಾಯ. ಹಾಗಾಗಿ ಈ ಘಟನೆಯನ್ನು ಬರೇಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಚಾಲಕನನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ.