
ಕೇರಳದ ತಿರುವನಂತಪುರಂನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಆಟೋಗಳು ಭಾಗಿಯಾಗಿವೆ ಎಂದು ಶಶಿ ತರೂರ್ ಮಾಹಿತಿ ನೀಡಿದ್ದಾರೆ.
ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಟೋವನ್ನು ಎಳೆಯುತ್ತಿರುವ ವಿಡಿಯೋ ಶೇರ್ ಮಾಡಿದ ಶಶಿ ತರೂರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
LPG ಗ್ರಾಹಕರಿಗೆ ಬಿಗ್ ಶಾಕ್: 2 ತಿಂಗಳಲ್ಲಿ 200 ರೂ. ಹೆಚ್ಚಳ – 597 ರೂ. ಇದ್ದ ದರ 797 ರೂ.ಗೆ ಏರಿಕೆ
ವಿಡಿಯೋದಲ್ಲಿ ಇನ್ನೂ ಹಲ ಆಟೋ ಡ್ರೈವರ್ಗಳು ಜೊತೆಗೆ ಕಾಂಗ್ರೆಸ್ ನಾಯಕರು ಇರೋದನ್ನ ನೀವು ಕಾಣಬಹುದಾಗಿದೆ.
ಪೆಟ್ರೋಲ್ ಮೇಲೆ ಹೇರಲಾಗುವ ಟ್ಯಾಕ್ಸ್ಗಳಲ್ಲಿ ವಿನಾಯಿತಿ ನೀಡಲು ವಿಫಲರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಿರುವನಂತಪುರದಲ್ಲಿ ಆಟೋ ರಿಕ್ಷಾವನ್ನ ಎಳೆಯೋದ್ರ ಮೂಲಕ ಆಕ್ರೋಶ ಹೊರಹಾಕಿದ್ದೇವೆ. ಈ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಆಟೋ ಚಾಲಕರು ಭಾಗಿಯಾಗಿದ್ದರು ಎಂದು ಶಶಿ ತರೂರ್ ಬರೆದುಕೊಂಡಿದ್ದಾರೆ.