alex Certify ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ತಪ್ಪಿದ್ದಲ್ಲ ಈ ಕಷ್ಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟವಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ತಪ್ಪಿದ್ದಲ್ಲ ಈ ಕಷ್ಟ….!

ಆಟದಿಂದ ದೇಹ, ಮನಸ್ಸಿಗೆ ನವೋಲ್ಲಾಸ ಸಿಗುತ್ತದೆ. ಆಟವಾಡುವುದರಿಂದ ದೇಹ ಸದೃಢವಾಗುತ್ತದೆ. ದಿನವಿಡೀ ಉಲ್ಲಾಸದಿಂದ ಕಾಲ ಕಳೆಯಬಹುದು ಎಂದೆಲ್ಲ ಅಂದುಕೊಂಡಿರುವ ನಮಗೆ ಕೆಲವು ಆಟಗಳಿಂದ ಪುರುಷರಿಗೆ ಬಂಜೆತನ ಬರಬಹುದು ಎಂದರೆ ನಂಬಲು ಕಷ್ಟವಾಗುತ್ತದೆ. ಹೌದಲ್ಲವೇ?

ಕ್ರಿಕೆಟ್, ಬೇಸ್ ಬಾಲ್, ಫುಟ್ ಬಾಲ್, ಕರಾಟೆ ಮೊದಲಾದ ಕ್ರೀಡೆಗಳಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅದು ಪುರುಷರ ಬಂಜೆತನಕ್ಕೆ ಕಾರಣವಾಗುತ್ತವೆ. ದೇಹದ ಇತರೆ ಅಂಗಗಳಿಗಿಂತ ಭಿನ್ನವಾಗಿ ದೇಹದಿಂದ ಹೊರಚಾಚಿರುವ ವೃಷಣಗಳಿಗೆ ಜೋರಾಗಿ ಪೆಟ್ಟು ಬಿದ್ದರೆ ಬಂಜೆತನ ಉಂಟಾಗಬಹುದು. ಆಟವಾಡುವಾಗ ಏಕಾಏಕಿ ಆಕಸ್ಮಿಕವಾಗಿ ವೃಷಣಗಳಿಗೆ ಪೆಟ್ಟು ಬಿದ್ದರೆ ವೀರ್ಯೋತ್ಪತ್ತಿ ಕಾರ್ಯಕ್ಕೆ ಕುಂದು ತರಬಹುದು. ಹಾಗಾಗಿ ಎಚ್ಚರಿಕೆಯಿಂದ ಆಟವಾಡಬೇಕು ಎಂದು ತಜ್ಞರು ಹೇಳುತ್ತಾರೆ.

ಮಾತ್ರವಲ್ಲ ರಕ್ಷಣಾ ಸಾಧನ ಹಾಕಿಕೊಂಡು ಆಟವಾಡುವುದನ್ನು ಮೈಗೂಡಿಸಿಕೊಳ್ಳಬೇಕು. ವೃಷಣಗಳಿಗೆ ಪೆಟ್ಟು ಬಿದ್ದಾಗ ನಿರ್ಲಕ್ಷ್ಯ ತೋರದೇ ವೈದ್ಯರ ಸಲಹೆ ಪಡೆಯಿರಿ. ಇಲ್ಲವಾದರೆ ವೃಷಣದಲ್ಲಿರುವ ಟಿಶ್ಯುಗಳಿಗೆ ಘಾಸಿಯಾದರೆ ಅವು ಕ್ಷಮತೆ ಕಳೆದುಕೊಂಡು ವೀರ್ಯ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು.

ಹಾಗಾಗಿ ಆಟವಾಡುವಾಗ ರಕ್ಷಣಾ ಸಾಮಗ್ರಿ ಧರಿಸಬೇಕು. ಅವುಗಳು ಗಟ್ಟಿಯಾಗಿರುವುದರಿಂದ ಯಾವ ಕಾರಣಕ್ಕೂ ಪೆಟ್ಟು ಬೀಳುವ ಸಾಧ್ಯತೆ ಇರುವುದಿಲ್ಲ. ಹಾಗಾಗಿ ಆಟವಾಡುವಾಗ ಎಚ್ಚರಿಕೆ ವಹಿಸಿ. ಏಟು ಬಿದ್ದಾಗ ಕಡೆಗಣಿಸದೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಬಂಜೆತನ ಉಂಟಾಗಬಹುದಾದ ಸಾಧ್ಯತೆಗಳಿಂದ ದೂರ ಇರಿ ಎನ್ನುತ್ತಾರೆ ತಜ್ಞರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...