
ಶಿವಮೊಗ್ಗ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ತೆರಳಲು ಆಗುಂಬೆ ಘಾಟಿ ಸಂಪರ್ಕ ಮಾರ್ಗವಾಗಿದೆ. ಆದರೆ ಕೆಲ ದಿನಗಳಿಂದ ಘಾಟಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಆಗುಂಬೆ ಘಾಟಿಯ ಮೂರು ಮತ್ತು ನಾಲ್ಕನೇ ತಿರುವಿನಲ್ಲಿ ಈ ಚಿರತೆ ಸಂಚರಿಸಿದೆ ಎಂದು ಹೇಳಲಾಗಿದ್ದು, ರಕ್ಷಣಾ ಗೋಡೆಯ ಮೇಲೆ ಮಲಗಿರುವುದನ್ನು ಕೆಲವರು ಗಮನಿಸಿದ್ದಾರೆ.
ವಾಹನಗಳ ಬೆಳಕು ಬೀಳುತ್ತಿದ್ದಂತೆಯೇ ಈ ಚಿರತೆ ಪರಾರಿಯಾಗಿದ್ದು, ದ್ವಿಚಕ್ರ ವಾಹನಗಳಲ್ಲಿ ಆಗುಂಬೆ ಘಾಟಿ ಮೂಲಕ ಸಂಚರಿಸುವವರು ಎಚ್ಚರದಿಂದ ಇರಬೇಕಾಗಿದೆ.