ಇತ್ತೀಚಿನ ದಿನಗಳಲ್ಲಿ ಅನೇಕರು ಎದೆನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಎದೆನೋವು ಹೃದಯಾಘಾತದಿಂದ ಮಾತ್ರ ಸಂಭವಿಸುವುದಿಲ್ಲ. ಎದೆಯುರಿ ಮತ್ತು ಎದೆನೋವಿಗೆ ಇನ್ನೂ ಅನೇಕ ಕಾರಣಗಳಿವೆ.
ನಿರಂತರವಾಗಿ ಎದೆನೋವು ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಅದು ಅನೇಕ ರೋಗಗಳಿಗೆ ಕಾರಣವಾಗುತ್ತದೆ.ಈ ನೋವಿನಿಂದ ಪರಿಹಾರ ಪಡೆಯಲು ನೀವು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ಎದೆ ನೋವು ಏಕೆ ಬರುತ್ತದೆ ಮತ್ತು ಅದಕ್ಕೆ ಯಾವ ರೀತಿ ಚಿಕಿತ್ಸೆ ಮಾಡಬಹುದು ಎಂಬುದನ್ನು ನೋಡೋಣ.
ಎದೆ ನೋವಿನ ಕಾರಣ
ಹಠಾತ್ ಎದೆ ನೋವು ಮತ್ತೆ ಮತ್ತೆ ಉಂಟಾದಾಗ, ನೀವು ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಅದು ಇತರ ಕಾಯಿಲೆಗಳನ್ನು ಸಹ ಪ್ರಚೋದಿಸುತ್ತದೆ. ಈ ಕಾರಣದಿಂದಾಗಿ ಮೂಳೆಗಳು ಮತ್ತು ಸ್ನಾಯುಗಳಲ್ಲಿ ಸಹ ನೋವು ಬರುತ್ತದೆ. ಕೆಲವೊಮ್ಮೆ ಅಸಿಡಿಟಿಯಿಂದಲೂ ಎದೆನೋವು ಬರುತ್ತದೆ. ಆಸಿಡ್ ರಿಫ್ಲೆಕ್ಸ್‌ನಂತಹ ಸಮಸ್ಯೆಯಿಂದಲೂ ಇದು ಉಂಟಾಗುತ್ತದೆ. ಹೃದಯಾಘಾತದ ಮುನ್ಸೂಚನೆಯಾಗಿಯೂ ಎದೆನೋವು ಬರಬಹುದು.
ಎದೆ ನೋವಿಗೆ ಮನೆ ಮದ್ದು
ತುಳಸಿ: ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ತುಳಸಿ ಗಿಡವು ಪ್ರತಿ ಮನೆಯಲ್ಲೂ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ರಿಂದ 5 ತುಳಸಿ ಎಲೆಗಳನ್ನು ಅಗಿದು ತಿನ್ನಬೇಕು. ಈ ರೀತಿ ಮಾಡುವುದರಿಂದ ಎದೆನೋವು ಕಡಿಮೆಯಾಗುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿಕೊಂಡು ಸಹ ಕುಡಿಯಬಹುದು.
ಬೆಳ್ಳುಳ್ಳಿ: ಬೆಳ್ಳುಳ್ಳಿ ಎದೆನೋವಿಗೆ ತುಂಬಾ ಪರಿಣಾಮಕಾರಿ ಮನೆಮದ್ದು. ಬೆಳ್ಳುಳ್ಳಿ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆಯಂತೆ. ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ತೆಗೆದುಕೊಂಡು ಅದರಲ್ಲಿ 3 ಎಸಳು ಬೆಳ್ಳುಳ್ಳಿ ಹಾಕಿ ಗ್ಯಾಸ್ ಮೇಲೆ ಕುದಿಯಲು ಇಡಿ. ನೀರು ಕುದಿ ಬಂದ ಬಳಿಕ ಗ್ಯಾಸ್ ಆಫ್ ಮಾಡಿ ಮತ್ತು ಅದಕ್ಕೆ ನಿಂಬೆ ರಸವನ್ನು ಹಾಕಿ. ಈ ಪಾನೀಯವನ್ನು ಸೇವಿಸಿದರೆ ಎದೆನೋವಿನಿಂದ ಬೇಗ ಪರಿಹಾರ ಸಿಗುತ್ತದೆ. ಇದಲ್ಲದೇ ಬೆಳ್ಳುಳ್ಳಿ ಸೇವನೆಯಿಂದ ಹೃದಯಾಘಾತವೂ ಅಪಾಯವೂ ನಿವಾರಣೆಯಾಗುತ್ತದೆ.
ನಿಂಬೆಹಣ್ಣು: ನಿಂಬೆಯಲ್ಲಿ ವಿಟಮಿನ್-ಸಿ ಪ್ರಮಾಣ ಹೆಚ್ಚಿದ್ದು, ದೇಹವನ್ನು ನಿರ್ವಿಷಗೊಳಿಸಲು ನೆರವಾಗುತ್ತದೆ. ಒಂದು ಬಟ್ಟಲು ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆಹಣ್ಣನ್ನು ಹಿಂಡಿ ಕುಡಿದರೆ ಎದೆನೋವು ನಿವಾರಣೆಯಾಗುತ್ತದೆ. ಇಷ್ಟೆಲ್ಲಾ ಮನೆಮದ್ದುಗಳನ್ನು ಮಾಡಿದ್ರೂ ಪರಿಹಾರ ಸಿಗದೇ ಇದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು.