ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ‘ಖುಷಿ’ ಚಿತ್ರದ ಟ್ರೈಲರ್ ಆಗಸ್ಟ್ 9ಕ್ಕೆ ಮೈತ್ರಿ ಮೂವೀ ಮೇಕರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈ ವಿಚಾರವನ್ನು ವಿಜಯ್ ದೇವರಕೊಂಡ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಂದರ ಹೊಂದಿರುವ ಈ ಚಿತ್ರವನ್ನು ಶಿವನಿರ್ವಾಣ ನಿರ್ದೇಶಿಸಿದ್ದು, ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ನಡಿ ನವೀನ್ ಹಾಗೂ ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ.
ಸೆಪ್ಟೆಂಬರ್ 1ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿದ್ದು, ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ವೆನಿಲ್ಲಾ ಕಿಶೋರ್, ಮುರುಳಿ ಶರ್ಮ, ಲಕ್ಷ್ಮಿ, ರೋಹಿಣಿ, ಜಯರಾಮ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.