alex Certify ಆಗಸ್ಟ್ ತಿಂಗಳ ‘ಪಡಿತರ’ ವಿತರಣೆ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ ತಿಂಗಳ ‘ಪಡಿತರ’ ವಿತರಣೆ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಆಗಸ್ಟ್ ತಿಂಗಳ ಪಡಿತರ ವಿತರಣೆ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಅಂತ್ಯೋದಯ ಮತ್ತು ಆದ್ಯತಾ ಕುಟುಂಬದ ಪಡಿತರ ಚೀಟಿಗಳಿಗೆ ಆಗಸ್ಟ್ ಮಾಹೆಯಲ್ಲಿ ಪಡಿತರ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ಹಂಚಿಕೆ ಮಾಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿಗೆ ಪ್ರತಿ ಪಡಿತರ ಚೀಟಿಗೆ 28 ಕೆಜಿ ಅಕ್ಕಿ ಹಾಗೂ 7 ಕೆಜಿ ರಾಗಿ, ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಪ್ರತಿ ಸದಸ್ಯರಿಗೆ 4 ಕೆಜಿ ಅಕ್ಕಿ ಹಾಗೂ 1 ಕೆಜಿ ರಾಗಿಯನ್ನು ನೀಡಲಾಗುತ್ತದೆ.

ಅಲ್ಲದೆ, ಇದರ ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...