ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟುವಿನ 2022ನೇ ಸಾಲಿನ ವರ್ಷದ ಪದ ಯಾವುದು ಗೊತ್ತಾ? ಗೊತ್ತಿಲ್ಲದಿದ್ದರೆ ಮುಂದೆ ಓದಿ. ʼGoblin Mode’ ಎಂಬುದು ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟುವಿನ 2022ನೇ ಸಾಲಿನ ಪದವಾಗಿದೆ.
ಆಕ್ಸ್ಫರ್ಡ್ ಲ್ಯಾಂಗ್ವೇಜಸ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಜನಿಕರಿಂದ ‘ವರ್ಷದ ಪದ’ ಆಯ್ಕೆಗೆ ವೋಟ್ ಮಾಡುವಂತೆ ಸೂಟಿಸಿತ್ತು.
ಅದರಂತೆ ಕಳೆದ ಎರಡು ವಾರಗಳಲ್ಲಿ, 3,00,000 ಕ್ಕೂ ಹೆಚ್ಚು ಜನರು ತಮ್ಮ ಮತ ಚಲಾಯಿಸಿದ್ದಾರೆ. ಈ ಮೂಲಕ ʼGoblin Mode’ ಎಂಬ ಪದವನ್ನ ವರ್ಷದ ಪದವಾಗಿ ಆಯ್ಕೆ ಮಾಡಿದ್ದಾರೆ.
“ಗಾಬ್ಲಿನ್ ಮೋಡ್” ಎಂಬ ಪದವನ್ನು ಸಾಮಾನ್ಯವಾಗಿ ಸಾಮಾಜಿಕ ರೂಢಿಗಳು ಅಥವಾ ನಿರೀಕ್ಷೆಗಳನ್ನು ತಿರಸ್ಕರಿಸುವ ರೀತಿಯಲ್ಲಿ, ಸೋಮಾರಿತನ, ಅಥವಾ ದುರಾಸೆಯ ನಡವಳಿಕೆಯನ್ನು ವಿವರಿಸಲು ಬಳಸಲಾಗುತ್ತದೆ.
ಈ ಪದವು ಫೆಬ್ರವರಿ 2022 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.