ಕೊಡಗಿನಲ್ಲಿ ಪ್ರವಾಸಿಗರ ಸಂದರ್ಶನಕ್ಕೆ ಯೋಗ್ಯವಾದ ನೂರಾರು ತಾಣಗಳಿವೆ. ಅದರಲ್ಲಿ ದಟ್ಟವಾದ ಕಾನನದ ಮಧ್ಯೆ ಹರಿದು ಬರುವ ಸುಂದರ ಪಾರೆಕಟ್ ಜಲಪಾತವೂ ಒಂದು.
ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲ, ತಲಕಾವೇರಿ ಸಮೀಪದಲ್ಲಿಯೇ ಕಾಣುವ ಕಾಲುದಾರಿಯ ಮೂಲಕ ಒಂದು ಕಿ.ಮೀ. ದೂರ ಸಾಗಿದರೆ ಇದು ಸಿಗುತ್ತದೆ. ಈ ಜಲಪಾತವು ಸುಮಾರು 360 ಅಡಿ ಎತ್ತರದಿಂದ ಧುಮುಕಿ ಹಾಲಿನ ನೊರೆಯಂತೆ ಹರಿದು ತನ್ನ ಭೋರ್ಗರೆತವನ್ನು ಸುತ್ತಲೂ ಹರಡಿ ನೋಡುಗರಿಗೆ ಸಂತೋಷ ಮತ್ತು ಉಲ್ಲಾಸ ನೀಡುತ್ತದೆ.
ಪಾರೆಕಟ್ ಜಲಪಾತದ ಭೋರ್ಗರೆತವು ಸುಮಾರು ಒಂದು ಕಿ.ಮೀ. ದೂರದವರೆಗೂ ಕೇಳಿಸುತ್ತದೆ. ಈ ಜಲಪಾತವು ಮಳೆಗಾಲದಲ್ಲಿ ನೋಡಲು ಬಹಳ ಆಕರ್ಷಣೀಯವಾಗಿರುತ್ತದೆ.