ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ ಆಕರ್ಷಕ ದೇಹ ಸಾಧ್ಯವಿಲ್ಲ.
ಇದಕ್ಕೆ ಕೆಲವೊಂದು ವಿಶೇಷ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ಜಿಮ್ ಗೆ ಹೋಗುವ ಜೊತೆಗೆ ಆರೋಗ್ಯಕರ ದೇಹ ಬಯಸಿದ್ದರೆ ಈ ಕೆಳಗಿನ ಆಹಾರ ಸೇವನೆ ಮಾಡೋದನ್ನು ಮರೆಯಬೇಡಿ.
ಮುಖದ ಅಂದ ಕೆಡಿಸುವ ಬ್ಲಾಕ್ ಹೆಡ್ಸ್ ನಿವಾರಿಸಲು ಇದೊಂದೇ ʼತರಕಾರಿʼ ಸಾಕು…!
ಓಟ್ಸ್ : ಆಕರ್ಷಕ ದೇಹ ಪಡೆಯಲು ಜಿಮ್ ನಲ್ಲಿ ಗಂಟೆಗಟ್ಟಲೆ ಬೆವರಿಳಿಸುವ ಜೊತೆಗೆ ದೇಹಕ್ಕೆ ಫೈಬರ್ ಅಂಶ ಬೇಕಾಗುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಉಪಹಾರದ ಜೊತೆ ಓಟ್ಸ್ ತಿನ್ನುತ್ತ ಬನ್ನಿ. ಇದು ನಿಮಗೆ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಪ್ರೊಟೀನ್, ಖನಿಜಗಳು ಮತ್ತು ಜೀವಸತ್ವಗಳನ್ನು ನೀಡುತ್ತದೆ. ಜೊತೆಗೆ ದೇಹ ಬೊಜ್ಜಾಗುವುದಿಲ್ಲ.
ಮೊಟ್ಟೆ : ಒಂದು ಮೊಟ್ಟೆಯಲ್ಲಿ 6-8 ಗ್ರಾಂ ಪ್ರೋಟೀನ್ ಇರುತ್ತೆ. ನೀವು ಜಿಮ್ ಗೆ ಹೋಗುವವರಾಗಿದ್ದರೆ ಪ್ರತಿದಿನ 5-6 ಮೊಟ್ಟೆಯನ್ನು ಅವಶ್ಯವಾಗಿ ತಿನ್ನಿ. ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಸ್ನಾಯುಗಳು ವೇಗ ಪಡೆಯಲು ಸಹಾಯವಾಗುತ್ತವೆ.
ಬ್ರೊಕಲಿ : ಮೂಳೆಗಳನ್ನು ಬಲಪಡಿಸಲು ಕಬ್ಬಿಣಾಂಶ ಅತ್ಯಗತ್ಯ. ಬ್ರೊಕಲಿಯಲ್ಲಿ ಕಬ್ಬಿಣ, ಪ್ರೋಟೀನ್, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕಟ್ಟುಮಸ್ತಾದ ದೇಹ ಹೊಂದಲು ಪ್ರತಿದಿನ ಬ್ರೊಕಲಿಯನ್ನು ತಿನ್ನಿ. ಇದ್ರಲ್ಲಿರುವ ವಿಟಮಿನ್ ಸಿ ದೇಹದಲ್ಲಿರುವ ಜೀವಕೋಶಗಳು ಹಾಳಾಗುವುದನ್ನು ತಡೆಯುತ್ತವೆ.
ಬಾಳೆಹಣ್ಣು : ಆಕರ್ಷಕ ದೇಹಕ್ಕೆ ಬಾಳೆಹಣ್ಣು ಬೆಸ್ಟ್. ಇದ್ರಲ್ಲಿ ನಿಯಾಸಿನ್, ಫೋಲಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗೆ ವಿಟಮಿನ್ ಎ ಮತ್ತು ಬಿ ಜಾಸ್ತಿಯಿರುತ್ತದೆ. ಇದನ್ನು ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ದಿನವಿಡೀ ನಿಮ್ಮ ಶರೀರ ಶಕ್ತಿಯುತವಾಗಿರಲು ಇದು ನೆರವಾಗುತ್ತದೆ.