![](https://kannadadunia.com/wp-content/uploads/2022/07/beauty-and-fashion-royalt-1024x683.jpg)
ಕಪ್ಪಗಿನ ಹೊಕ್ಕಳು ಹೊಂದಿರುವ ಮಹಿಳೆಯರು ಹೊಕ್ಕಳು ಕಾಣದಂತೆ ಸೀರೆಯುಡ್ತಾರೆ. ಹಾಗೆ ಹೊಕ್ಕಳು ಕಾಣದ ಡ್ರೆಸ್ ಧರಿಸ್ತಾರೆ. ನೀವು ಹೊಕ್ಕಳು ಕಾಣುವ ಡ್ರೆಸ್ ತೊಟ್ಟು ಎಲ್ಲರನ್ನು ಆಕರ್ಷಿಸಬೇಕೆಂದ್ರೆ ಮೊದಲು ಹೊಕ್ಕಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕಲಿಯಿರಿ.
ಕಪ್ಪಗಾಗುವ ಹೊಕ್ಕಳನ್ನು ಬೆಳ್ಳಗೆ ಮಾಡಲು ಮಾರುಕಟ್ಟೆಯಲ್ಲಿ ಕೆಲ ಕ್ರೀಂಗಳಿವೆ. ಆದ್ರೆ ಈ ಕ್ರೀಂಗಳು ಹೊಕ್ಕಳನ್ನು ಬೆಳ್ಳಗೆ ಮಾಡುವ ಬದಲು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಹಾಗಾಗಿ ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ನಿಮ್ಮ ಹೊಕ್ಕಳ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ಒಂದು ಚಿಟಿಕಿ ಮುಲ್ತಾನಿ ಮಿಟ್ಟಿ ತೆಗೆದುಕೊಳ್ಳಿ. ಇದಕ್ಕೆ ಎರಡು ಹನಿ ಬಾದಾಮಿ ತೈಲವನ್ನು ಹಾಕಿ. ನಿಂಬೆ ರಸ ಅಥವಾ ಗುಲಾಬಿ ರಸವನ್ನು ಹಾಕಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಸ್ನಾನ ಮಾಡುವ 15 ನಿಮಿಷ ಮೊದಲು ಇದನ್ನು ಹೊಕ್ಕಳಿಗೆ ಹಚ್ಚಿ.
ಹೊಕ್ಕಳು ತುಂಬಾ ಕಪ್ಪಗಾಗಿದ್ದರೆ ಚಿಂತೆ ಪಡುವ ಅಗತ್ಯವಿಲ್ಲ. ಬೇಯಿಸಿದ ಆಲೂಗಡ್ಡೆಯನ್ನು ಹೊಕ್ಕಳ ಮೇಲಿಟ್ಟು ಮಸಾಜ್ ಮಾಡಿ. ಇದು ಕಪ್ಪು ಕಲೆ ತೆಗೆಯಲು ನೆರವಾಗುತ್ತದೆ.
ಬೇಯಿಸಿದ ಪಪ್ಪಾಯಿ ತಿರುಳು ಕೂಡ ಹೊಕ್ಕಳಿನ ಕಪ್ಪು ಕಲೆಯನ್ನು ದೂರ ಮಾಡುತ್ತದೆ.