ಚಿತ್ರ ಮಂದಿರ ವಿಷಯದಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಆದೇಶ ಹೊರಡಿಸಿದ್ದು, ಚಿತ್ರಮಂದಿರ, ಚಿತ್ರರಂಗ ಹಾಗೂ ವೀಕ್ಷಕರಿಗೆ ಶಾಕ್ ನೀಡಿದ್ದಾರೆ.
ಕೊರೊನಾದಿಂದಾಗಿ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳ ಟಿಕೆಟ್ ಬೆಲೆ ಏರಿಕೆ ಮಾಡಬೇಕೆಂದು ನಟ ಚಿರಂಜೀವಿ ಸರ್ಜಾ ನೇತೃತ್ವದಲ್ಲಿ ತೆಲುಗು ಚಿತ್ರರಂಗ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಸಿಎಂ ಜಗನ್ ಮೋಹನ್ ರೆಡ್ಡಿ ಈ ಮನವಿಗೇನೋ ಸ್ಪಂದಿಸಿದ್ದಾರೆ. ಆದರೆ, ಪ್ರೇಕ್ಷಕರಿಂದ ಹಿಡಿದು ಎಲ್ಲರಿಗೂ ಶಾಕ್ ನೀಡಿದ್ದಾರೆ. ಟಿಕೆಟ್ ದರ ಏರಿಕೆ ಮಾಡುವುದರೊಂದಿಗೆ ಚಿತ್ರಮಂದಿರಗಳ ಟಿಕೆಟ್ ನ್ನು ಸರ್ಕಾರವೇ ಮಾರಾಟ ಮಾಡುತ್ತದೆ ಎಂದು ಆದೇಶ ಹೊರಡಿಸಿದ್ದಾರೆ. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
BIG NEWS: ಯಾವುದೇ ಕಾರಣಕ್ಕೂ ಕಾಯ್ದೆ ಜಾರಿಗೆ ಬಿಡುವುದಿಲ್ಲ; ಖಡಕ್ ಆಗಿ ಉತ್ತರಿಸಿದ ಸಿದ್ದರಾಮಯ್ಯ
ಸದ್ಯ ಟಿಕೆಟ್ ಬೆಲೆ ಕೇಳಿ ವೀಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರವೇ ಟಿಕೆಟ್ ಮಾರಾಟ ಮಾಡುವ ನಿಯಮಕ್ಕೆ ಚಿತ್ರರಂಗ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಸರ್ಕಾರದ ನಿರ್ಧಾರದ ವಿರುದ್ಧ ನಟ ಪವನ್ ಕಲ್ಯಾಣ್ ತೀವ್ರವಾಗಿ ಗುಡುಗಿದ್ದಾರೆ.
ಸಿಎಂ ಜಗನ್ ಹಾಲಿವುಡ್ ಜೊತೆ ಸೇರಿಕೊಂಡು ತೆಲುಗು ಚಿತ್ರರಂಗ ನೆಲಕ್ಕೆ ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಹಲವು ಸಿನಿಮಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ನಾವು ಹಾಕಿದ ಬಂಡವಾಳದ ಹಣ ಬರಲಿ ಎಂದು ಮನವಿ ಮಾಡಿದರೆ, ಚಿತ್ರರಂಗವನ್ನೇ ಕೆಡವುವ ಪ್ರಯತ್ನವನ್ನು ಸಿಎಂ ಮಾಡುತ್ತಿದ್ದಾರೆ. ನಾವು ಕಷ್ಟ ಪಟ್ಟು ಮಾಡಿದ ಚಿತ್ರವನ್ನು ಇವರೇಕೆ ಮಾರಾಟ ಮಾಡುತ್ತಾರೆ….? ಎಂದು ಪ್ರಶ್ನಿಸಿದ್ದಾರೆ.