ಆಂಡ್ರಾಯ್ಡ್ 13 ಅನ್ನು ಡೌನ್ಲೋಡ್ ಮಾಡಿಕೊಂಡಿರುವ ಗೂಗಲ್ ಪಿಕ್ಸೆಲ್ ಬಳಕೆದಾರರಿಗೆ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಇನ್‌ಸ್ಟಾಲ್ ಮಾಡುತ್ತಿದ್ದಂತೆ ವೈರ್‌ಲೆಸ್ ಚಾರ್ಜಿಂಗ್ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಬಳಕೆದಾರರು ಕಂಗಾಲಾಗಿದ್ದಾರೆ.
ಆಂಡ್ರಾಯ್ಡ್ 13 ಅಪ್‌ಗ್ರೇಡ್ ಮಾಡಿದ ತಕ್ಷಣ ವೈರ್‌ಲೆಸ್ ಚಾರ್ಜಿಂಗ್ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ಪಿಕ್ಸೆಲ್ ಬಳಕೆದಾರರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. Pixel 6 ಸರಣಿಯನ್ನು ಒಳಗೊಂಡಂತೆ ಬಹುತೇಕ ಎಲ್ಲಾ Pixel ಮಾದರಿಗಳ ಮೇಲೆ ಇದು ಪರಿಣಾಮ ಬೀರಿದೆ. ಆದರೆ ಪ್ರಾಥಮಿಕವಾಗಿ Pixel 4 ಮತ್ತು Pixel 4 XL ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
Pixel 6 ಮತ್ತು 6 Pro ಮಾಲೀಕರಿಗೆ, Android 13 ಗೆ ನವೀಕರಿಸಿದ ನಂತರ Android 12 ಗೆ ಹಿಂತಿರುಗಲು ಅನುಮತಿಸದ ಕಾರಣ ಸಮಸ್ಯೆ ಬಿಗಡಾಯಿಸಿದೆ. Pixel 4 ಮತ್ತು Pixel 5 ಹೊಂದಿರುವವರು Android 12 ಗೆ ಹಿಂದಿರುಗಲು ಆಪ್ಷನ್ ಇದೆ. ಈ ಸಮಸ್ಯೆಗೆ Google ಇನ್ನೂ ಪರಿಹಾರ ನೀಡಿಲ್ಲ. ಚಾರ್ಜರ್ ಬಳಸಿದರೂ ಸಮಸ್ಯೆ ಉಂಟಾಗಿದೆ ಎಂದು ಪಿಕ್ಸೆಲ್ ಬಳಕೆದಾರರು ಹೇಳ್ತಿದ್ದಾರೆ. ಕೆಲವು ಪಿಕ್ಸೆಲ್ ಬಳಕೆದಾರರು ಅಡಾಪ್ಟಿವ್ ಚಾರ್ಜಿಂಗ್‌ನಂತಹ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿದ್ರೆ ಸಮಸ್ಯೆ ಬಗೆಹರಿಯಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು Google Fi ಬಳಕೆದಾರಿಗೆ Android 13 ಅನ್ನು ಇನ್‌ಸ್ಟಾಲ್ ಮಾಡಿದ ಬಳಿಕ ತಮ್ಮ Pixel ಫೋನ್‌ಗಳಲ್ಲಿ ಸಂಪರ್ಕಿಸಲು (RCS) ಪ್ರವೇಶಿಸಲು ಸಾಧ್ಯವಿಲ್ಲ. ಆಂಡ್ರಾಯ್ಡ್ 13 ಬೀಟಾದಿಂದಲೇ ಈ ಸಮಸ್ಯೆ ಉದ್ಭವಿಸಿದ್ದು, ಗೂಗಲ್‌ಗೆ ಈಗಾಗ್ಲೇ ಮಾಹಿತಿ ನೀಡಿದ್ದಾರೆ.