ಗೂಗಲ್ ನಿಮ್ಮ ಆನ್ಲೈನ್ ಆ್ಯಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ಫೋನ್ಗಳಲ್ಲಿ ನೀವು ಆಸಕ್ತಿ ತೋರಿಸಿದ ಉತ್ಪನ್ನಗಳ ಬಗ್ಗೆಯೇ ಹೆಚ್ಚು ಜಾಹೀರಾತುಗಳನ್ನು ತೋರಿಸಲು ಯತ್ನಿಸುತ್ತದೆ. ನಿಮಗೆ ಈಗಾಗಲೇ ಈ ರೀತಿಯ ಅನುಭವಾಗಿರಬಹುದು.
ಆನ್ಲೈನ್ ಶಾಪಿಂಗ್ ಸೈಟ್ಗಳಲ್ಲಿ ನೀವು ಯಾವ ಉತ್ಪನ್ನಗಳನ್ನು ಹೆಚ್ಚಾಗಿ ಹುಡುಕಾಟ ನಡೆಸಿರುತ್ತಿರೋ ಅದೇ ನಿಮ್ಮ ಮೊಬೈಲ್ನಲ್ಲಿ ಹೆಚ್ಚು ಜಾಹೀರಾತಿನ ರೂಪದಲ್ಲಿ ಕಾಣ ಸಿಗುತ್ತದೆ. ಇದು ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಗಿದ್ದರೂ ಸಹ ಸ್ಮಾರ್ಟ್ಫೋನ್ಗಳಲ್ಲಿ ಸಾಕಷ್ಟು ಮಾಹಿತಿಗಳನ್ನು ಇನ್ನೊಬ್ಬರಿಗೆ ಶೇರ್ ಮಾಡುತ್ತಿದ್ದೀರಿ ಎಂಬುದನ್ನು ಮರೆಯುವಂತಿಲ್ಲ. ಇದನ್ನು ತಪ್ಪಿಸಬೇಕು ಅಂದರೆ ಸೆಟ್ಟಿಂಗ್ಸ್- ಗೂಗಲ್ -ಆ್ಯಡ್ಸ್ ಗೆ ಹೋಗಿ ಇಲ್ಲಿ Opt out of Ads Personalization ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಲಾಕ್ ಸ್ಕ್ರೀನ್ನಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಹೈಡ್ ಮಾಡಿ:
ಆಂಡ್ರಾಯ್ಡ್ 5.0 ಬಳಿಕ ಲಾಕ್ ಸ್ಕ್ರೀನ್ನಲ್ಲಿಯೇ ನೇರವಾಗಿ ಅಧಿಸೂಚನೆಗಳನ್ನು ನೋಡಲು ಹಾಗೂ ನೋಟಿಫಿಕೇಶನ್ ಬಾರ್ನಲ್ಲಿ ಸಂವಹನ ನಡೆಸುವ ವೈಶಿಷ್ಟ್ಯವನ್ನು ಗೂಗಲ್ ನೀಡಿದೆ. ಈ ರೀತಿಯ ಆಯ್ಕೆಯನ್ನು ನೀವು ಬಂದ್ ಮಾಡಲೇಬೇಕು. ಇದಕ್ಕಾಗಿ ನೀವು ಸೆಟ್ಟಿಂಗ್ಸ್ – ಅಪ್ಲಿಕೇಶನ್ ಹಾಗೂ ನೋಟಿಫಿಕೇಶನ್- ನೋಟಿಫಿಕೇಶನ್ ಗೆ ಅಲ್ಲಿ Sensitive notifications ಆಯ್ಕೆಯನ್ನು ಆಫ್ ಮಾಡಿ.
ಆ್ಯಪ್ ಪಮಿರ್ಷನ್ನ್ನು ಬದಲಾಯಿಸಿ:
ಕೆಲವು ಅಪ್ಲಿಕೇಶನ್ಗಳು ಸರಿಯಾಗಿ ಕಾರ್ಯನಿರ್ವಹಿಸಲು ನಿಮ್ಮ ಬಳಿ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿಯನ್ನು ಕೇಳುತ್ತದೆ. ಕೆಲವೊಂದು ಬಾರಿ ನಿಮ್ಮ ಬ್ಲೂಟೂತ್, ಫೋನ್ ಕಾಂಟ್ಯಾಕ್ಟ್, ಮೈಕ್ರೋಫೋನ್ ಸೇರಿದಂತೆ ವಿವಿಧ ಮಾಹಿತಿಯನ್ನು ಅಕ್ಸೆಸ್ ಮಾಡುತ್ತವೆ. ಇದು ನಿಮ್ಮ ಗೌಪ್ಯತೆ ಹಾಗೂ ಭದ್ರತೆಗೆ ಹಾನಿ ಉಂಟು ಮಾಡಬಹುದು. ಇದನ್ನು ತಪ್ಪಿಸಲು ನೀವು ಸೆಟ್ಟಿಂಗ್ಸ್ – ಆ್ಯಪ್ಸ್ & ನೋಟಿಫಿಕೇಶನ್ – ಇಲ್ಲಿ ನೀವು ಯಾವೆಲ್ಲ ಆ್ಯಪ್ಗಳಿಗೆ ಅನುಮತಿ ನೀಡಿದ್ದೀರಿ ಎಂಬುದನ್ನು ಪರಿಶೀಲಿಸಿ ಅನಾವಶ್ಯಕ ಎನಿಸಿದ್ದನ್ನು ಆಫ್ ಮಾಡಬಹುದಾಗಿದೆ.