ತೆಂಗಿನ ಹಾಲನ್ನು ನಿತ್ಯ ಸಪ್ಲಿಮೆಂಟ್ ರೀತಿ ಸೇವಿಸುವುದರಿಂದ ಪೊಟ್ಯಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ಕಾಪರ್, ಐರನ್, ಜಿಂಕ್ ಮತ್ತು ಸೆಲೆನಿಯಮ್ ಆಂಟಿ ಆಕ್ಸಿಡೆಂಟ್ ಹೇರಳವಾಗಿ ನಮ್ಮ ದೇಹಕ್ಕೆ ದೊರೆಯುತ್ತದೆ.
ಹಾಲಿನ ಅಲರ್ಜಿ ಇರುವವರು ಪ್ಯಾಕೆಟ್ ಹಾಲು ಕುಡಿಯುವುದಕ್ಕಿಂತ ತೆಂಗಿನ ಹಾಲು ಮಾಡಿ ಕುಡಿಯಿರಿ. ಇದರಲ್ಲಿ ಲ್ಯಾಕ್ಟೋಸ್ ಇಲ್ಲ, ಹಾಗಾಗಿ ಯಾವುದೇ ರೀತಿಯ ಹಾಲಿನ ಅಲರ್ಜಿ ಉಂಟಾಗುವುದಿಲ್ಲ. ತೆಂಗಿನ ಹಾಲಿನಲ್ಲಿ ಕಡಿಮೆ ಕೊಬ್ಬು ಇದ್ದು, ಇದು ಲೋ ಫ್ಯಾಟ್ ಮಿಲ್ಕ್ ಆಗಿದೆ. ಇದರಲ್ಲಿ ಯಾವುದೇ ರೀತಿಯ ಕೆಟ್ಟ ಕೊಬ್ಬು ಇಲ್ಲ.
ಇದರಲ್ಲಿರುವ ಒಳ್ಳೆಯ ಫ್ಯಾಟಿ ಆಸಿಡ್ ನಮ್ಮ ಹೃದಯದ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ಉಪಯೋಗಕಾರಿ. ತೆಂಗಿನ ಹಾಲಿನಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಫ್ಯಾಕ್ಟರ್ ಇರುವುದರಿಂದ ನಮ್ಮ ದೇಹವನ್ನು ಇನ್ಫೆಕ್ಷನ್ ವಿರುದ್ಧ ಕಾಪಾಡುತ್ತದೆ.
ಡಯಾಬಿಟಿಕ್ ರೋಗಿಗಳಿಗೆ ತೆಂಗಿನ ಹಾಲು ಬೆಸ್ಟ್ ಎಂದು ಹೇಳಬಹುದು. ಇದು ರಕ್ತದಲ್ಲಿನ ಶುಗರ್ ಲೆವೆಲ್ ಅನ್ನು ಕಾಪಾಡುತ್ತದೆ. ಹಾಗೆಯೇ ತೆಂಗಿನ ಹಾಲಿನಲ್ಲಿ ಇರುವ ಜಿಂಕ್ ಮತ್ತು ಐರನ್ ನ್ಯೂಟ್ರಿಷನ್ ಗಳು ಅನೀಮಿಯಾ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ.