ಕಳೆದ ಹಲವು ದಿನಗಳಿಂದ ತಮಿಳು V/S ಹಿಂದಿ ಎನ್ನುವ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡಿನ ಆಡಳಿತಾರೂಢ ಸರ್ಕಾರ ಸೇರಿದಂತೆ ತಮಿಳಿಗರು ಕೂಡ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉದ್ಯೋಗ ನೇಮಕಾತಿ ಸೂಚನೆ ನೀಡಿರುವ ಬಗ್ಗೆಯೂ ತಮಿಳಿಗರು ವ್ಯಂಗ್ಯ ಮಾಡುತ್ತಿದ್ದಾರೆ.
ಕ್ಲರ್ಕ್, ಪೋಸ್ಟಲ್ ಅಸಿಸ್ಟೆಂಟ್ ಸೇರಿದಂತೆ ಹಲವು ಉದ್ಯೋಗಗಳ ನೇಮಕಾತಿಗೆ ಭಾರತ ಸರ್ಕಾರದ ಕಾರ್ಮಿಕ ಸಚಿವಾಲಯ ಹೊರಡಿಸಿರುವ ನೋಟೀಸ್ ಅನ್ನು, ತಮಿಳಿನ ಖಾಸಗಿ ಮಾಧ್ಯಮವೊಂದರ ಮುಖ್ಯ ಸಂಪಾದಕರೊಬ್ಬರು ಟ್ವೀಟ್ ಮಾಡಿದ್ದು ಕೇಂದ್ರದ ಕಾಲೆಳೆದಿದ್ದಾರೆ.
ಕೇಂದ್ರ ಹೊರಡಿಸಿರುವ ನೋಟೀಸ್ ಇಂಗ್ಲಿಷ್ ಭಾಷೆಯಲ್ಲಿರುವುದನ್ನು ಟೀಕಿಸಿರುವ ಅವರು, ಅಮೆರಿಕಾದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸುಮಾರು 5,000 ಹುದ್ದೆಗಳನ್ನು ಭರ್ತಿ ಮಾಡಲು ಸಿಬ್ಬಂದಿ ಆಯ್ಕೆ ಆಯೋಗವು ಪರೀಕ್ಷೆ ಕೈಗೊಳ್ಳಲಿದೆ. ಮಾರ್ಚ್ 7ರೊಳಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಿ. ಯುವಜನತೆಯಲ್ಲಿ ಈ ಸಂದೇಶವನ್ನು ಹರಡಿ, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ ಎಂದು ವ್ಯಂಗವಾಗಿ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ. ಸಧ್ಯ ಈ ಟ್ವೀಟ್ ವೈರಲ್ ಆಗುತ್ತಿದ್ದು, ಕಾಮೆಂಟ್ ವಿಭಾಗ ಕೂಡ ತಮಿಳಿನಿಂದ ತುಂಬಿದೆ.