alex Certify ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ; ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ; ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನ

ಕೊಪ್ಪಳ ತಾಲೂಕಿನ ಕುಟಗನಹಳ್ಳಿ ಗ್ರಾಮದ ಅಶೋಕ ರಾವ್ ಕುಲಕರ್ಣಿ ಕುಟುಂಬ ಕಳೆದ 7 ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ನೀಡುತ್ತಿದ್ದು, ಕೊರೊನಾ ಕಾರಣಕ್ಕೆ 2019 ರಿಂದ ಈ ಕಾರ್ಯ ಸಾಧ್ಯವಾಗಿರಲಿಲ್ಲ.

ಮೃಗಶಿರ ಮಳೆ ನಕ್ಷತ್ರ ಕೂಡುವ ದಿನದಂದು ಔಷಧವನ್ನು ವಿತರಿಸುವ ವಾಡಿಕೆಯಿದ್ದು, ಬುಧವಾರದಂದು ಇದರ ವಿತರಣೆ ಇದ್ದ ಕಾರಣ ರಾಜ್ಯದ ವಿವಿಧ ಜಿಲ್ಲೆ ಮಾತ್ರವಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

6-20 ರ ವರೆಗೆ ಕಾದಿದ್ದು ಜನರು ಔಷಧವನ್ನು ಪಡೆದಿದ್ದು, ಸತತ ಮೂರು ವರ್ಷಗಳ ಇದನ್ನು ಸೇವಿಸಿದರೆ ಅಸ್ತಮಾ ಮಾತ್ರವಲ್ಲದೆ ದಮ್ಮು, ಕೆಮ್ಮು, ಕಾಮಾಲೆ ಬಹ ಗುಣಮುಖವಾಗುತ್ತದೆ ಎಂಬ ನಂಬಿಕೆಯಿದೆ. ಇದೊಂದು ನಾಟಿ ಔಷಧವಾಗಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಎಲ್ಲ ವಯೋಮಾನದವರು ಸೇವಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...