ಆಕಾರದಲ್ಲಿ ತೊಂಡೆಕಾಯಿ ಸಣ್ಣದಿರಬಹುದು, ಆದರೆ ಇದರ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…?
ಅಸ್ತಮಾ, ಮಧುಮೇಹ ಹಾಗೂ ಮಲಬದ್ಧತೆ ಸಮಸ್ಯೆ ದೂರ ಮಾಡಲು ತೊಂಡೆಕಾಯಿ ರಾಮಬಾಣ ಎನ್ನಲಾಗಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ತೊಂಡೆಕಾಯಿ ಸೇವಿಸುವ ಮಂದಿಯ ರಕ್ತದಲ್ಲಿ ಸಕ್ಕರೆ ಪ್ರಮಾಣ ಬಹಳ ಕಡಿಮೆ ಇರುವುದು ದೃಢಪಟ್ಟಿದೆ.
ತೊಂಡೆಕಾಯಿಯಲ್ಲಿ ನಾರಿನಂಶ ಸಾಕಷ್ಟಿದ್ದು, ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ ಎನ್ನಲಾಗಿದೆ. ಕಡಿಮೆ ಕ್ಯಾಲರಿ ಹೊಂದಿರುವ ಇದು ದೇಹ ತೂಕವನ್ನು ನಿಯಂತ್ರಿಸಲೂ ನೆರವಾಗುತ್ತದೆ.
ಟೈಪ್ 2 ಮಧುಮೇಹಿಗಳು ಇದನ್ನು ನಿತ್ಯ ಅಥವಾ ವಾರದಲ್ಲಿ ಮೂರು ಬಾರಿ ಇದನ್ನು ಸೇವಿಸುವ ಮೂಲಕ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸಾಂಬಾರು, ಮಜ್ಜಿಗೆ ಹುಳಿ, ಪಲ್ಯದ ರೂಪದಲ್ಲಿ ಇದನ್ನು ಸವಿಯಬಹುದು.