ಬೆಂಡೆಕಾಯಿ ವರ್ಷದ ಎಲ್ಲಾ ದಿನಗಳಲ್ಲೂ ಸಿಗುವ ತರಕಾರಿ. ಇದರ ಸೇವನೆಯಿಂದ ಅದೆಷ್ಟು ರೀತಿಯ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ
ಮೂರು ನಾಲ್ಕು ಬೆಂಡೆ ಕಾಯಿಗಳನ್ನು ತೆಗೆದುಕೊಂಡು, ಅದನ್ನು ಸ್ವಚ್ಛವಾಗಿ ತೊಳೆದು ಸಣ್ಣದಾಗಿ ಕತ್ತರಿಸಿ ಹಿಂದಿನ ರಾತ್ರಿಯೇ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದಾಕ್ಷಣ ಆ ತಣ್ಣಗಿನ ನೀರನ್ನು ಕುಡಿಯುವುದರಿಂದ ಕರುಳು ಶುದ್ಧವಾಗುತ್ತದೆ. ಜೀರ್ಣಶಕ್ತಿ ಚುರುಕುಗೊಳ್ಳುತ್ತದೆ.
ಅಲ್ಸರ್ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ. ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರಮಾಡುತ್ತದೆ. ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ.
ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ದೂರಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಹಾಗಾಗಿ ಬೆಂಡೆಯ ಹಲವು ಪ್ರಯೋಜನಗಳು ನಿಮ್ಮದಾಗಬೇಕಾದರೆ ಅದನ್ನು ಹಸಿಯಾಗಿಯೇ ಸೇವನೆ ಮಾಡಬೇಕು. ಇದರಲ್ಲಿರುವ ನಾರಿನ ಅಂಶ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ.