ಊಟದ ಬಳಿಕ ಹುಳಿ ತೇಗು ಬರುತ್ತಿದೆಯೇ, ಸರಿಯಾಗಿ ಹಸಿವಾಗುತ್ತಿಲ್ಲವೇ, ಹೊಟ್ಟೆ ಉಬ್ಬರಿಸಿದಂತಿದೆಯೇ, ತಲೆ ನೋವೇ ಸಂಶಯವೇ ಇಲ್ಲ, ಇದು ಆ್ಯಸಿಡಿಟಿಯ ಲಕ್ಷಣಗಳು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸದೆ ಹೋದಲ್ಲಿ ಇದು ರೋಗವಾಗಿ ಕಾಡುವುದರಲ್ಲಿ ಸಂಶಯವಿಲ್ಲ. ಅಡುಗೆ ಮನೆಯಲ್ಲಿ ಇದಕ್ಕೆ ಮದ್ದಿದೆ ಎಂದರೆ ನೀವು ನಂಬುತ್ತೀರಾ?
ಕರಿದ ಹಾಗು ಖಾರವಾದ ವಸ್ತುಗಳಿಂದ ಸಾಧ್ಯವಾದಷ್ಟು ದೂರವಿರಿ. ಟೊಮೊಟೊ, ದ್ರಾಕ್ಷಿ, ಕಿತ್ತಳೆಯಲ್ಲಿ ಆಸಿಡಿಟಿ ಅಂಶ ಹೆಚ್ಚಿರುವುದರಿಂದ ಮೂರು ಹೊತ್ತು ಅದನ್ನು ತಿನ್ನದಿರಿ.
ಎರಡು ಎಲೆ ತುಳಸಿ, ಪುದಿನಾಗಳನ್ನು ತಣ್ಣಗಿನ ನೀರಿನಲ್ಲಿ ಎರಡು ಗಂಟೆ ಹೊತ್ತು ನೆನೆಸಿಡಿ. ಬಳಿಕ ಸೋಸಿ ಮುಂಜಾನೆ ಖಾಲಿ ಹೊಟ್ಟೆಗೆ ಸೇವಿಸಿ.
ಕೊತ್ತಂಬರಿ ನೀರನ್ನು ಕುದಿಸಿ ತುಂಡು ಬೆಲ್ಲ ಸೇರಿಸಿ ಕುಡಿದರೆ ಎದೆಯುರಿ ಸಮಸ್ಯೆ ಕಡಿಮೆಯಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದಲೂ ಅಸಿಡಿಟಿ ಹೆಚ್ಚಬಹುದು. ಹಾಗಾಗಿ ಎಚ್ಚರವಾಗಿರಿ. ಒಂದು ಊಟದಿಂದ ಇನ್ನೊಂದು ಊಟದ ಮಧ್ಯೆ ಗ್ಯಾಪ್ ಇರಲಿ.
ರಾತ್ರಿ ಮಲಗುವ ಮುನ್ನ ತಣ್ಣಗಿನ ಒಂದು ಲೋಟ ಹಾಲು ಕುಡಿಯಿರಿ. ಇದು ಬಹು ಪಾಲು ಗ್ಯಾಸ್ಟಿಕ್ ಸಮಸ್ಯೆಗಳನ್ನು ನಿವಾರಿಸುತ್ತದೆ.