alex Certify ಅಸಲಿ ಬೆಲೆಗಿಂತ 318 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ 2007ರ ಈ ಮೊಬೈಲ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಲಿ ಬೆಲೆಗಿಂತ 318 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ 2007ರ ಈ ಮೊಬೈಲ್‌…..!

ಆಪಲ್‌ ಕಂಪನಿಯ ಐಫೋನ್‌ ಕ್ರೇಝ್‌ ಜನರಲ್ಲಿ ಸಾಕಷ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಳೆಯ ಮಾಡೆಲ್‌ನ ಐಫೋನ್‌ ಒಂದು ಬರೋಬ್ಬರಿ 1.3 ಕೋಟಿ ರೂಪಾಯಿಗೆ ಹರಾಜಾಗಿದೆ. 2007ರ ಮಾಡೆಲ್ ಇದು, ಸೀಲ್ಡ್ ಪ್ಯಾಕ್ನಲ್ಲಿದ್ದ ಐಫೋನ್ 4 ಅನ್ನು 1.3 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಫೋನ್ ಅಸಲಿ ಬೆಲೆಗಿಂತ 318 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿರೋದು ವಿಶೇಷ. ಇದು LCG ಹರಾಜಿನಿಂದ ಹರಾಜಾದ ಅತ್ಯಂತ ಅಪರೂಪದ ಮಾದರಿ.

ಮಾರಾಟವಾದ ಐಫೋನ್ ಆಪಲ್‌ನ ಐಫೋನ್ 4ನ 4GB ಮಾಡೆಲ್‌. ಇದನ್ನು ಕಂಪನಿ ಕೆಲವೇ ತಿಂಗಳುಗಳವರೆಗೆ ಉತ್ಪಾದಿಸಿತ್ತು. ಈ ಐಫೋನ್ 4 ಅನ್ನು ಜೂನ್‌ನಲ್ಲಿ ಹರಾಜಿಗೆ ಹಾಕಲಾಯಿತು. ಫೋನ್‌ಗಾಗಿ ಬಿಡ್ಡಿಂಗ್ ಜೂನ್ 30 ರಂದು ಪ್ರಾರಂಭವಾಗಿತ್ತು. ಆರಂಭಿಕ ಬೆಲೆ 10,000 ಡಾಲರ್‌. ಅಂತಿಮವಾಗಿ 1,58,644 ಡಾಲರ್‌ಗೆ ಫೋನ್‌ ಹರಾಜಾಗಿದೆ. ಅಂದರೆ 1,30,23,958 ರೂಪಾಯಿಗೆ ಐಫೋನ್‌ 4  ಬಿಕರಿಯಾಗಿದೆ.

ಈ ಐಫೋನ್ 4 ನ ಬೆಲೆ ಅಸಲಿ ಬೆಲೆ 499 ಡಾಲರ್‌ ಆಗಿದ್ದರೂ, ಅದರ ಬೆಲೆಗಿಂತ 318 ಪಟ್ಟು ಹೆಚ್ಚು ದುಬಾರಿ ಬೆಲೆಗೆ ಮಾರಾಟವಾಗಿದೆ. iPhone 4 ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ರೀತಿ ಅಪರೂಪಕ್ಕೊಂದು ಮಾಡೆಲ್‌ಗಳು ಅಲ್ಲೋ ಇಲ್ಲೋ ಸಿಗಬಹದು ಅಷ್ಟೆ. ಐಫೋನ್ 4 ಅನ್ನು ಕಂಪನಿಯು 2 ರೂಪಾಂತರಗಳಲ್ಲಿ ಬಿಡುಗಡೆ ಮಾಡಿತ್ತು. ಅದರಲ್ಲಿ 4GB ಮತ್ತು ಇನ್ನೊಂದು 8GB ಆಯ್ಕೆ ಇತ್ತು.

ಮೂಲ ರೂಪಾಂತರವು ಕೇವಲ 2 ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿತ್ತು, ನಂತರ ಕಂಪನಿ ಇದನ್ನು  ಸ್ಥಗಿತಗೊಳಿಸಿತ್ತು ಐಫೋನ್ 4, 3.5-ಇಂಚಿನ ಡಿಸ್‌ಪ್ಲೇ ಹೊಂದಿದೆ. 1420 mAh ಬ್ಯಾಟರಿ, 5MP ಬ್ಯಾಖFF ಕ್ಯಾಮೆರಾ ಮತ್ತು 0.3MP ಫ್ರಂಟ್‌ ಕ್ಯಾಮರಾ ಇದರಲ್ಲಿದೆ. ಈ ಮಾಡೆಲ್‌  ಭಾರತಕ್ಕೆ ಬಂದಿದ್ದು 2010 ರಲ್ಲಿ. ಇದರ ಚಿಕ್ಕ ಡಿಸ್‌ಪ್ಲೇ ಮತ್ತು ಕಾಂಪ್ಯಾಕ್ಟ್ ಗಾತ್ರದ ಕಾರಣ ಜನರು ಇಷ್ಟಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...