ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 50 ದಿನಗಳಿಗೂ ಅಧಿಕ ಕಾಲ ಲಾಕ್ ಡೌನ್ ಘೋಷಿಸಿದ್ದ ಕಾರಣ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನತೆ ಹೈರಾಣಾಗಿ ಹೋಗಿದ್ದರು.
ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರು ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇವರುಗಳ ನೆರವಿಗಾಗಿ ಎರಡು ಸಾವಿರ ರೂ. ಗಳ ಒಂದು ಬಾರಿಯ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಿತ್ತು.
ಯಾವುದೇ ಕ್ಷಣ ಅಪ್ಪಳಿಸಲಿದೆ ಭೂಮಿಯತ್ತ ಧಾವಿಸಿ ಬರುತ್ತಿರುವ ಶಕ್ತಿಶಾಲಿ ಸೌರ ಮಾರುತ; ಮೊಬೈಲ್, ಜಿಪಿಎಸ್ ನೆಟ್ ವರ್ಕ್ ಗೆ ಅಡ್ಡಿ
ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್ ಗಳು, ಮೆಕ್ಯಾನಿಕ್, ಹಮಾಲರು, ಚಿಂದಿ ಆಯುವವರು, ಅಕ್ಕಸಾಲಿಗರು ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ಇರುವವರು ಈ ಪ್ಯಾಕೇಜ್ ಪಡೆಯಲು ಅರ್ಹರಾಗಿದ್ದಾರೆ.
ಜುಲೈ 31ರೊಳಗೆ 2000 ರೂಪಾಯಿಗಳ ನೆರವಿನ ಪ್ಯಾಕೇಜ್ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಹರು https://sevasindhu.karnataka.gov.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.