ಅಶ್ವತ್ಥ ಪೂಜೆಯಿಂದ ಶನಿ ದೋಷ ದೂರವಾಗುತ್ತದೆ. ಶ್ರೀಮದ್ ಭಾಗವತ ಪುರಾಣದಲ್ಲಿ ಅಶ್ವತ್ಥ ಮರವನ್ನು ಶ್ರೀಕೃಷ್ಣ ತನ್ನದೇ ರೂಪವೆಂದು ವಿವರಿಸಿದ್ದಾನೆ. ಅಶ್ವತ್ಥ ಮರವನ್ನು ನಿಯಮಿತವಾಗಿ ಪೂಜೆ ಮಾಡುವವರು ಕೆಲವೊಂದು ವಿಷ್ಯಗಳ ಬಗ್ಗೆ ಗಮನವಿಡಬೇಕಾಗುತ್ತದೆ.
ಅಮವಾಸ್ಯೆ ತಿಥಿ ದಿನ ಅಶ್ವತ್ಥ ಮರದಲ್ಲಿ ವಿಷ್ಣು ಹಾಗೂ ಲಕ್ಷ್ಮಿ ವಾಸ ಮಾಡ್ತಾರೆ ಎಂಬ ನಂಬಿಕೆಯಿದೆ. ಈ ದಿನ ಅಶ್ವತ್ಥ ಪೂಜೆ ಮಾಡಿದ್ರೆ ಬಡತನ ನಿವಾರಣೆಯಾಗಲಿದೆ.
ಅಶ್ವತ್ಥ ಆರಾಧನೆಯಿಂದ ಸಾವಿರಾರು ಪಾಪಗಳು ನಾಶವಾಗುತ್ತವೆ. ಅಶ್ವತ್ಥ ಮರದ ಪ್ರದಕ್ಷಿಣೆ ಹಾಕಿ ಪೂಜೆ ಮಾಡುವುದ್ರಿಂದ ಆಯಸ್ಸು ವೃದ್ಧಿಯಾಗುತ್ತದೆ.
ಅಶ್ವತ್ಥ ಮರಕ್ಕೆ ಜಲ ಅರ್ಪಣೆ ಮಾಡುವುದ್ರಿಂದ ಎಲ್ಲ ದೋಷ ನಿವಾರಣೆಯಾಗುತ್ತದೆ. ಭಾಗ್ಯ ಪ್ರಾಪ್ತವಾಗುತ್ತದೆ.
ಶನಿ ದೋಷ ನಿವಾರಣೆಗೆ ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ಜಲ ಅರ್ಪಿಸಿ 7 ಪ್ರದಕ್ಷಿಣೆ ಮಾಡಬೇಕು.